ಸಮಾಜಕ್ಕೆ ಮಾದರಿಯಾಗಲು ಸಲಹೆ

h9-keshav vidyakendra
Published on

ಹುಬ್ಬಳ್ಳಿ: ಇಲ್ಲಿಯ ರೇಣುಕಾನಗರದ ಕೇಶವ ವಿದ್ಯಾ ಕೇಂದ್ರದಲ್ಲಿ ಸೋಮವಾರ ಸವಿ ನೆನಪುಗಳ ಸಂಭ್ರಮ ಏರ್ಪಡಿಸಲಾಗಿತ್ತು.

ಮಧುಸೂದನ ಕುಲಕರ್ಣಿ ಮಾತನಾಡಿ, ಕೇಶವ ವಿದ್ಯಾಕೇಂದ್ರದಲ್ಲಿ ಕಲಿತ ಮಕ್ಕಳು ಆದರ್ಶ ವ್ಯಕ್ತಿತ್ವ ಹೊಂದಬೇಕು. ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಎಂದರು.

ಪಿಪಿಟಿ ಮೂಲಕ ಮಕ್ಕಳಿಗೆ ಅವರ ಬಾಲ್ಯವನ್ನು ನೆನಪಿಸಲಾಯಿತು.

ವಿನಾಯಕ ಗುರೂಜಿ ಅನಿಸಿಕೆ ಹಂಚಿಕೊಂಡರು. ವಿಜಯಲಕ್ಷ್ಮೀ ಮಾತಾಜಿ ನಿರೂಪಿಸಿದರು. ಶ್ವೇತಾ ಮಾತಾಜಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. 50 ಮಕ್ಕಳು ಭಾಗವಹಿಸಿದ್ದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net