ಜೀವನದಲ್ಲಿ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

h20-gurukula
Published on

ಹುಬ್ಬಳ್ಳಿ: ಇಲ್ಲಿಯ ಶಿರೂರ ಪಾರ್ಕ್ ಬಳಿಯ ಗುರುಕುಲ ಕೌಶಲ ಕೇಂದ್ರದಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಭವಿಷ್ಯದ ಉತ್ತಮ ನಾಗರಿಕರಾಗಲು ಅನುಕೂಲವಾಗಲಿದೆ. ಶಿಸ್ತು, ಸಂಯಮ ಇದ್ದರೆ ದೇಶದ ಭವಿಷ್ಯ ಉತ್ತುಂಗಕ್ಕೇರಲಿದೆ ಎಂದರು.
ಸೀನಿಯರ್ ಅಲಿ ಫೆಲೋ ಹಾರ್ವಡ್ಸ್ ವಿಶ್ವವಿದ್ಯಾಲಯದ ನವೀನ್ ಝಾ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಗುಡ್ಡಪ್ಪ ದೇಸೂರ, ಕೇಂದ್ರದ ಸಿಇಒ ಗುರನಗೌಡ ಕುರಗುಂದ, ಉದ್ಯಮಿ ಜಗದೀಶ ಶೇಖರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net