ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಸಲಹೆ

h2-mahesh college
Published on

ಹುಬ್ಬಳ್ಳಿ: ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕದೆ ಸರಿಯಾದ ಮಾರ್ಗದರ್ಶನ ನೀಡಬೇಕು. ಜತೆಗೆ ಪ್ರೋತ್ಸಾಹಿಸಬೇಕು ಎಂದು ಮಾಡುವುದರ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವೇಜ್ ಲರ್ನಿಂಗ್ ಸಂಸ್ಥಾಪಕಿ ನಿವೇದಿತಾ ಶ್ರೀನಾಥ ಅವರು ಪಾಲಕರಿಗೆ ತಿಳಿವಳಿಕೆ ನೀಡಿದರು.

ನಗರದ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯ ಎನ್.ಎಲ್.ಇ. ಸಂಸ್ಥೆಯ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2025-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಜವಾದ ಗೆಲವು ಏನೆಂದರೆ ಮಕ್ಕಳು ಜೀವನ ಕೌಶಲ ಕಲಿಯಬೇಕು. ಆಗ ಉಳಿದೆಲ್ಲವು ತನ್ನಿಂದ ತಾನೆ ಬರುತ್ತವೆ ಎಂದರು.

ಎನ್.ಎಲ್.ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನ ಮತ್ತು ಬುದ್ಧಿವಂತಿಕೆಯ ವ್ಯತ್ಯಾಸವನ್ನು ಏಕಲವ್ಯನ ದೃಷ್ಟಾಂತ ಮೂಲಕ ಮನಮುಟ್ಟುವಂತೆ ಹೇಳಿದರು.

ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥ ರಿಯಾಜ್ ಬಸರಿ ಮಾತನಾಡಿ, ಶಿಸ್ತು, ವಿಧೇಯತೆ, ತಾಳ್ಮೆ ಹಾಗೂ ಸಂಯಮವನ್ನು ಅಳವಡಿಸಿಕೊಳ್ಳುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬುದನ್ನು ವಿವರಿಸಿದರು.

ಪ್ರಾಚಾರ್ಯ ರಾಮ ಮೋಹನ ಎಚ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರ ಕ್ರೀಡೆ ಮತ್ತು ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕಾರ್ಯದರ್ಶಿ ಆರ್.ಎನ್. ದೇಸಾಯಿ, ಖಜಾಂಚಿ ವೈಶಾಲಿ ಗೋರೆ, ಜಿ.ವಿ. ಜೋಶಿ ಶಾಲೆಯ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ, ಗುರುರಾಜ ಕೌಜಲಗಿ ಹಾಗೂ ರವಿರಾಜ ಸಿದ್ಲಿಂಗ್ ಉಪಸ್ಥಿತರಿದ್ದರು.

ಆಕಾಂಕ್ಷಾ ಮತ್ತು ಸಂಗಡಿಗರಿಂದ ಸ್ವಾಗತ ನೃತ್ಯ ಜರುಗಿತು. ಅಧಿತಿ ಹಾಗೂ ಅರುಂಧತಿ ಪ್ರಾರ್ಥಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ್ ನಿರೂಪಿಸಿದರು. ಉಪನ್ಯಾಸಕಿ ಶಿಬಾನಿ ಗೋಷ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net