ಇಷ್ಟಪಟ್ಟು ಓದುವ ಕ್ರಮ ಬೆಳೆಸಿಕೊಳ್ಳಿ

CHN TAVARKERE
Published on

ಚನ್ನಗಿರಿ : ಬಡವರು, ಮದ್ಯಮ ವರ್ಗದವರಿಗೆ ಶಿಕ್ಷಣವೇ ನಿಜವಾದ ಆಸ್ತಿ ನಿಜ. ಆದರೆ ವಿದ್ಯಾರ್ಥಿಗಳು ಕಷ್ಟಪಡದೆ ಇಷ್ಟಪಟ್ಟು ಓದುವ ಕ್ರಮ ಬರಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಎನ್.ಎಸ್.ನಾಗರಾಜ್ ಸಲಹೆ ನೀಡಿದರು.

ಚನ್ನಗಿರಿ ತಾಲೂಕು ತಾವರೆಕೆರೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ದಾವಣಗೆರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಶನಿವಾರ ಅಯೋಜಿಸಿದ್ದ ಬಾಲಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಒತ್ತಡದ ವ್ಯಾಸಂಗ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಬೆಳಗ್ಗೆ ನಿದ್ದೆಯಿಂದ ಎದ್ದ ಸಮಯದಿಂದ ಹಿಡಿದು ಸಂಜೆ ನಂತರದಲ್ಲಿ ನೋಟ್​ಪುಸ್ತಕ, ಬರವಣಿಗೆ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿರುತ್ತಾರೆ. ತೂಕದ ಬ್ಯಾಗ್ ಹೆಗಲಿಗೇರಿಸಿ ಹೋಗುವುದನ್ನು ನೋಡುವುದೇ ಕಷ್ಟವಾಗಿದೆ ಎಂದರು.

ಕಲಿಕೆಗೆ ಮಾತ್ರ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿಕ್ಷಕರು ಕ್ರಮ ವಹಿಸಬೇಕು. ಉನ್ನತ ವ್ಯಾಸಂಗ ಮಾಡಲು ಹೆಚ್ಚು ಅಂಕಗಳ ಅಗತ್ಯವಿದೆ. ಆದರೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅಂಕ ಬೇಕು. ಅದರ ಒತ್ತಡದಲ್ಲಿ ಮಕ್ಕಳಿಗೆ ಮನರಂಹಬ ಇರುವುದಿಲ್ಲ. ಇದಕ್ಕಾಗಿ ಬಾಲಸಂಗಮ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಹೇಳಿದರು.

ಶಿಕ್ಷಕರ ಬಳಿ ವಿದ್ಯಾರ್ಥಿಗಳು ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಹೊರತರಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶಾಲೆಯ 70 ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗುಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತಾಲೂಕು ಪ್ರಮುಖ್ ದೇವರಾಜ್ ನೆಲ್ಲಿಹಂಕಲು, ತಾಲೂಕು ವ್ಯವಸ್ಥಾ ಪ್ರಮುರ್ಖ ದುರ್ವಿಗೆರೆ ಗುರುಮೂರ್ತಿ, ಗೌರಮ್ಮ, ಗೀತಾ, ಕೆ.ಪಿ.ಶ್ರುತಿ, ಸ್ವಯಂಸೇವಕರಾದ ಟಿ.ಎಸ್.ವಿನಯ್, ರುದ್ರೇಶ್, ಧನುಷ್, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net