

ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿಎಸ್‌ಆರ್ ಅನುದಾಡಿ ನಿರ್ಮಾಣಗೊಂಡಿರುವ ಸ್ಪೇಸ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಅನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಯತ್ನದಿಂದ 4 ಲಕ್ಷ 95 ಸಾವಿರ ರೂ. ಸಿಎಸ್‌ಆರ್ ಅನುದಾನ ಬಂದಿದೆ. ಇದರಿಂದ ಈ ಲ್ಯಾಬ್ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಅಧ್ಯಯನ ಮಾಡಿ ದೇಶಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸಿದ್ದು ಮೊಗಲಿಶೆಟ್ಟರ್, ಹಿಮಾಲಯ ಸ್ಪೇಸ್ ಸೆಂಟರ್‌ನ ವೀರೇಶ ಪಾಟೀಲ, ಶ್ರೀದೇವಿ ರೂಗಿ, ಡಿಡಿಪಿಐ ಕಚೇರಿಯ ಎಸ್.ಎಂ. ಹುಡೇದಮನಿ, ಬಿಆರ್‌ಸಿ ಎಂ.ಎಸ್. ಶಿವಳ್ಳಿಮಠ, ಸಂಜಯ ಮಾಳಿ, ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಸುರಪೂರ, ಮುಖ್ಯಗುರು ಡಿ.ಜಿ. ಕಮ್ಮಾರ, ಬಿ.ವೈ. ತಹಸೀಲ್ದಾರ ಇತರರಿದ್ದರು.