ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

h17-mahaveer
Published on

ಹುಬ್ಬಳ್ಳಿ: ನಗರದ ಶ್ರೀ ಮಹಾವೀರ ಜೈನ ಶಿಕ್ಷಣ ಸಂಸ್ಥೆಯ ಶ್ರೀ ಮಹಾವೀರ ಜೈನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸತ್ತು ರಚನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು.

ರಾಜೇಂದ್ರಕುಮಾರ್ ಜೈನ್ ಮಾತನಾಡಿ, ಶಾಲೆಯು ನಾಯಕರನ್ನು ನಿರ್ವಿುಸುತ್ತದೆ. ನಾಯಕತ್ವ ಗುಣ ಬೆಳೆಸಿಕೊಳ್ಳುವ ವಿದ್ಯಾರ್ಥಿಗಳು ಭವ್ಯ ಭಾರತದ ನಿರ್ವತೃಗಳು ಎಂದರು.

ಮುಖ್ಯೋಪಾಧ್ಯಾಯ ಚಂದ್ರಕಾಂತ ಕಬಾಡಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಮಹೇಶ ಚವ್ಹಾಣ, ವಿದ್ಯಾರ್ಥಿನಿ ಪ್ರತಿನಿಧಿ ಪ್ರಾಚಿ ರಾಜಪುರೋಹಿತ್, ಶಿಕ್ಷಣ ಸಚಿವರಾದ ಸುಜಲ ಬನಸಾಲಿ, ಬಸಮ್ಮ ಭಜಂತ್ರಿ, ಕ್ರೀಡಾ ಸಚಿವರಾದ ರಿಷಿ ಮೆರವಾಡೆ, ಪೂಜಾ ಚಳ್ಳಣ್ಣವರ, ಪ್ರವಾಸೋದ್ಯಮ ಸಚಿವರಾದ ಮೋಹನ ತುಳಿಸಿಮನಿ, ಸೋನಲ್ ಭಾಂಡಗೆ, ಸಾಂಸ್ಕೃತಿಕ ಸಚಿವರಾದ ಕುಶಾಲ ಕಾಟಿಗರ, ಮಾನ್ಯ ಅಡಿಗ, ಆರೋಗ್ಯ ಮತ್ತು ಶಿಸ್ತು ಸಚಿವರಾದ ತೇಜಸ್ ಬಹುದ್ದೂರಬಂಡಿ, ಅನುಷಾ ದೊಡ್ಡಮನಿ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಸಂಸ್ಥೆಯ ಚೇರ್ಮನ್ ಅಶೋಕ ಜೈನ್, ಅಧ್ಯಕ್ಷ ವಿನೋದ ಗಾದಿಯಾ, ಕಾರ್ಯದರ್ಶಿ ಸಚಿನ್ ಜೈನ್, ಮುಖ್ಯೋಪಾಧ್ಯಾಯನಿ ಶೈಲಜಾ ಧರ್ಮಸಿ ಇತರರು ಇದ್ದರು. ಯಶಿತಾ ಕಲಾಲ, ಪಲ್ಲವಿ ಸುಣಗಾರ ನಿರೂಪಿಸಿದರು. ವಾಸವಿ ಜಂತ್ಲಿ ಸಾಗತಿಸಿದರು. ಮನು ಮಡಿವಾಳರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net