ಮಹಿಳೆ ಸಬಲೆ ಎಂದು ತೋರಿಸಲು ಸಲಹೆ

Oplus_131072
Oplus_131072
Published on

ಹುಬ್ಬಳ್ಳಿ: ಪ್ರತಿ ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿಸಬೇಕು. ಎಂತಹ ಕೆಲಸವಾಗಲಿ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಕೆಎಂಸಿಆರ್‌ಐನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ ಡಾ. ಸರಸ್ವತಿ ಕರೆಕಾಳ ಸಲಹೆ ನೀಡಿದರು.

ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜ್‌ನ ಬಿಸಿಎ ವಿಭಾಗ ವತಿಯಿಂದ ಇಲ್ಲಿಯ ಕೆಎಲ್‌ಇ ಸಂಸ್ಥೆಯ ಬಯೋಟೆಕ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾವಲಂಬನೆ ಜೀವನ ಸಾಗಿಸುವ ಮಹಿಳೆಯರು ಆರೋಗ್ಯದಲ್ಲೂ ಎಚ್ಚರವಹಿಸುವುದು ಅಗತ್ಯ. ಆರೋಗ್ಯ ತಪ್ಪಿದರೆ ಕುಟುಂಬದವೇ ಬೇಸ್ತು ಬೀಳಲಿದೆ ಎಂದರು.

ಮನೋರೋಗ ತಜ್ಞ ಡಾ. ಸಮೀರ ಮಂಗಳವೇಡಿ ಮಾತನಾಡಿ, ಮನಸ್ಸಿನಲ್ಲಿ ಒತ್ತಡವಿದ್ದರೆ ಯಾವ ಕೆಲಸವೂ ನಿರ್ಗಳವಾಗಿ ನಡೆಯುವುದಿಲ್ಲ. ಮನೋದೈಹಿಕ ಸಾಮರ್ಥ್ಯ ವೃದ್ಧಿಗೆ ಧ್ಯಾನ, ವ್ಯಾಯಾಮ, ವಿಶ್ರಾಂತಿ ಅನುರಿಸರಿಸಬೇಕು. ಪರೀಕ್ಷಾ ಸಮಯದಲ್ಲಿ ಭಯ ಬೀಳದೇ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಪ್ರೊ. ಸುನೀಲ ವರ್ಣೇಕರ ಮಾತನಾಡಿದರು.

ಸಂಯೋಜಕ ಪ್ರೊ. ಸುನೈನಾ ಎಂ.ಎಂ. ಇತರರು ಉಪಸ್ಥಿತರಿದ್ದರು.

ಕಾವ್ಯಾ ವಿ. ಸ್ವಾಗತಿಸಿದರು. ಅನನ್ಯಾ ಪ್ರಾರ್ಥಿಸಿದರು. ಪೂಜಾ ಮತ್ತು ಐಶ್ವರ್ಯಾ ಅತಿಥಿಗಳನ್ನು ಪರಿಚಯಿಸಿದರು. ಲೀಜಾ ವಂದಿಸಿದರು. ಅನುಷಾ ಎಚ್. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net