ಸಸಿ ನೆಟ್ಟು ಪೋಷಿಸಲು ಸಲಹೆ

h20-ishwar khandre
Published on

ಹುಬ್ಬಳ್ಳಿ: ಜೆಎಸ್ ಗ್ಲೋಬಲ್ ಫೌಂಡೇಷನ್ (ಎನ್‌ಜಿಒ) ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ನೆಹರು ನಗರದ ಎಚ್‌ಡಿಎಂಸಿ ಉದ್ಯಾನದಲ್ಲಿ ಶುಕ್ರವಾರ ವೃಕ್ಷಾರೋಪಣಾ ಅಭಿಯಾನ ಏರ್ಪಡಿಸಲಾಗಿತ್ತು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸಬೇಕು. ಮುಂದಿನ ಜನಾಂಗವನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಫೌಂಡೇಷನ್ ಸಂಸ್ಥಾಪಕ ಪ್ರೊ.ಜಿಶಾನ್ ಸಿರ್ಸಂಗಿ 10 ಲಕ್ಷ ಸಸಿ ನೆಡುವ ಸಂಕಲ್ಪ ತೊಟ್ಟಿದ್ದಾರೆ. ಈಗಾಗಲೇ 513 ಸಸಿ ನೆಟ್ಟಿದ್ದಾರೆ. ಈ ಗುರಿ 30 ಲಕ್ಷದವರೆಗೆ ಹೆಚ್ಚಿಸಬೇಕು ಎಂದರು.

ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ನಿವೃತ್ತ ಡಿಜಿಪಿ ಶಂಕರ ಬಿದರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಫೌಂಡೇಷನ್ ಸಂಸ್ಥಾಪಕ ಪ್ರೊ.ಜಿಶಾನ್ ಸಿರ್ಸಂಗಿ, ಶರಣಪ್ಪ ಕೊಟಗಿ, ಅಂದಪ್ಪ ಸಂಕನೂರ, ಮೋಹನ ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net