ವಿಮಾ ಸೌಲಭ್ಯ ಸದ್ಬಳಕೆಗೆ ಸಲಹೆ

16_MDG_04_ABHIYANA
Published on

ಮುಂಡರಗಿ: ತಾಲೂಕಿನ ಬಿದರಹಳ್ಳಿ ಗ್ರಾಪಂ ವ್ಯಾಪ್ತಿಯ ಮುಂಡವಾಡ ಗ್ರಾಮದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಮುಂಡರಗಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಡವಾಡ ಶಾಖೆ ಆಶ್ರಯದಲ್ಲಿ ಸೋಮವಾರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಜನಸುರಕ್ಷಾ ಕಾರ್ಯಕ್ರಮ ಅಭಿಯಾನ ಕಾರ್ಯಕ್ರಮ ಜರುಗಿತು.

ಮುಂಡವಾಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಅಗತ್ಯ ದಾಖಲೆಯೊಂದಿಗೆ ಬ್ಯಾಂಕ್‌ಗೆ ಬಂದು ಕೆವೈಸಿ ಮಾಡಿಸಿಕೊಳ್ಳಬೇಕು. ಉಳಿತಾಯ ಖಾತೆ ಹೊಂದಿರುವವರು ಆಧಾರ್, ಪ್ಯಾನ್ ಒದಗಿಸಿ ಕೆವೈಸಿ ಅಥವಾ ರಿಕೆವೈಸಿಮಾಡಿಸಿ ಮಾಡಿಸಿ ಉಳಿತಾಯ ಖಾತೆಗಳು ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಕ ಸಂದೀಪ ಕಟ್ಟಿ ಮಾತನಾಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ವರ್ಷಕ್ಕೆ 436 ರೂ. 18 ವರ್ಷದಿಂದ 50 ವರ್ಷದವರಗೆ ಜೀವ ವಿಮೆ 2,00,000 ರೂ. ವಿಮಾ ಸೌಲಭ್ಯವಿರುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ 20 ರೂ. 18ರಿಂದ 70 ವರ್ಷದವರಗೆ 2,00,000ರೂ. ಅಪಘಾತ ವಿಮೆ ಸೌಲಭ್ಯವಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net