

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸಂಸ್ಥೆಯ ನೌಕರರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಮಾತನಾಡಿ, ಸಂಸ್ಥೆಯಲ್ಲಿ ತಂದೆ-ತಾಯಿ ನಿಮ್ಮ ಏಳ್ಗೆಗಾಗಿ ನಿತ್ಯವೂ ಶ್ರಮಿಸುತ್ತಿದ್ದಾರೆ. ಚೆನ್ನಾಗಿ ಅಭ್ಯಾಸ ಮಾಡಿ ಉನ್ನತ ಸಾಧನೆಗೇರಬೇಕು ಎಂದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ, ಪ್ರಶ್ನೆಗಳಿಗೆ ಉತ್ತರಿಸಿ, ಸಂದೇಹ ನಿವಾರಿಸಿದರು.
ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲೆ ಸುಮನಾ.ಯು., ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್. ರಾಮನಗೌಡರ, ಎಂ. ಸಿದ್ಧಲಿಂಗೇಶ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ. ವಿಜಯಕುಮಾರ, ಅಧಿಕಾರಿಗಳಾದ ಎಂ.ಬಿ. ಕಪಲಿ, ಪಿ.ಆರ್. ಕಿರಣಗಿ, ಜಿ. ಶ್ರೀನಾಥ, ಆರ್.ಎಂ. ರಾಜೇಂದ್ರ ಇತರರು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟೀಮನಿ ನಿರೂಪಿಸಿದರು.