ಅಂಗವಿಕಲರು ಸ್ವಾವಲಂಬಿಗಳಾಗಲು ಸಲಹೆ

h27-limb
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯ 76 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್​ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಇಲ್ಲಿನ ಕಿಮ್್ಸ ಆವರಣದ ಮಹಾವೀರ ಲಿಂಬ್ ಸೆಂಟರ್​ನಲ್ಲಿ ಏರ್ಪಡಿಸಲಾಗಿತ್ತು.

ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, 76ನೇ ವರ್ಷದ ಸೇವೆಯ ಸ್ಮರಣಾರ್ಥ 76 ಫಲಾನುಭವಿಗಳಿಗೆ ಉಚಿತ ಕೃತಕ ಕೈ-ಕಾಲುಗಳನ್ನು ಹಂತ-ಹಂತವಾಗಿ ನೀಡಲಾಗುವುದು. ಇದು ಅಂಗವಿಕಲರು ಸ್ವಾವಲಂಬಿಗಳಾಗಿ ಜೀವಿಸಲು ಅನುಕೂಲವಾಗಲಿದೆ ಎಂದರು.

ಕ್ಲಬ್ ಜಿಲ್ಲಾ ಗವರ್ನರ್ ಡಾ. ನಾಸಿರ ಬೊರಸದವಾಲ ಶಿಬಿರ ಉದ್ಘಾಟಿಸಿದರು. 2 ಗಾಲಿ ಕುರ್ಚಿಗಳನ್ನು ದೇಣಿಗೆ ನೀಡಿದರು.

ಕಾರ್ಯದರ್ಶಿ ವಸಂತ ಭಸ್ಮೆ, ಪ್ರಮುಖರಾದ ಸುರೇಂದ್ರ ಪೊರವಾಲ, ಅಬ್ದುಲ್ ಸಾದೀಖ್, ಪ್ರಕಾಶರಾವ್, ಮಾನವ ಸಂಘವಿ, ಕಾಂತಿಲಾಲ ಬೊಹರಾ, ಸುಭಾಷ ಡಂಕ, ಗೌತಮ ಗುಲೇಚಾ, ಅಶೋಕ ಜೈನ್, ಎಂ.ಕೆ. ಪಾಟೀಲ, ಉಮೇಶ ಗಡ್ಡದ, ಸಿದ್ದೇಶ್ವರ ಕಮ್ಮಾರ, ಮಂಜುನಾಥ ಹೊಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net