ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ

h6-nle society
Published on

ಹುಬ್ಬಳ್ಳಿ: ನಗರದ ಎನ್.ಎಲ್.ಇ. ಸೊಸೈಟಿಯ ಡಾ.ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2025-2026 ನೇ ಸಾಲಿನ ವಿದ್ಯಾರ್ಥಿ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು ಇತ್ತೀಚೆಗೆ ಏರ್ಪಾಟಾಗಿತ್ತು.

ಪಾಲಿಕೆ ಉಪಮೇಯರ್ ಸಂತೋಷ ಚವ್ಹಾಣ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ನಾಮಫಲ ವಿತರಿಸಿ ಮಾತನಾಡಿ, ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಲು ಇದು ಉತ್ತಮ ಅವಕಾಶ ಎಂದರು.

ಸಂಸ್ಥೆ ಕಾರ್ಯದರ್ಶಿ ರಾಜಾ ದೇಸಾಯಿ, ಜಂಟಿ ಕಾರ್ಯದರ್ಶಿ ಸದಾನಂದ ಕಾಮತ, ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ವಿಶಾಲ ಬಿನ್ನಾಳ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.

ಶಾಲೆಯ ಕಮಾಂಡರಾಗಿ ಆಯ್ಕೆಯಾದ ಅನನ್ಯ ಬಿರಾದರ ಪಾಟೀಲ, ಉಪಕಮಾಂಡರಾಗಿ ಶ್ರೇಯಸ್ ರಟಗಲ್ ಮತ್ತು ಜೈನಾ ಶೇಖ, ಕ್ರೀಡಾ ಮಂತ್ರಿಯಾಗಿ ವರ್ಷಾ ತಬಾಜ್ ಮತ್ತು ಸುಮೇದ ಸೋಳಂಕಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾರ್ಯಕ್ರಮದ ಸಂಚಾಲಕ ಮಾರುತಿ ತಟ್ಟಿಮನಿ ಉಸ್ತುವಾರ ವಹಿಸಿದ್ದರು.

ಭಕ್ತಿ ಕೆ. ಮತ್ತು ಯಾಸಿಕಾ ಕೆ . ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net