

ಹುಬ್ಬಳ್ಳಿ: ಇಲ್ಲಿಯ ರೋಟರಿ ಮಿಡ್‌ಟೌನ್ ಎಜುಕೇಷನ್ ಆ್ಯಂಡ್ ವೆಲ್‌ಫೇರ್ ಸೊಸೈಟಿಯ ರೋಟರಿ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.
ರೋಟರಿ ಡಿಸ್ಟ್ರಿಕ್ಟ್ ಗರ್ವನರ್ ಶರದ್‌ಪೈ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ವಿದ್ಯೆಯ ಜತೆಗೆ ಮಾನವೀಯ ಮೌಲ್ಯ ತಿಳಿಸಬೇಕು. ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಲು ಪ್ರೋತ್ಸಾಹಿಸಬೇಕು. ತಂದೆ-ತಾಯಿ ಹಾಗೂ ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಸಬೇಕು ಎಂದರು.
ಅಸ್ಟಿಸ್ಟಂಟ್ ಗವರ್ನರ್ 3170 ಸಂಜನಾ ಮಹೇಶ್ವರಿ, ಶಾಲೆ ಅಧ್ಯಕ್ಷ ಲಿಂಗರಾಜ ಪಾಟೀಲ, ರೋಟರಿ ಕ್ಲಬ್ ಆಫ್ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಸದಸ್ಯರಾದ ಕೌಸ್ತುಭ ಸಂಶೀಕರ, ಪ್ರವೀಣ ಬನ್ಸಾಲಿ, ಮುಖ್ಯೋಪಾಧ್ಯಾಯಿನಿ ಕೀರ್ತಿ ದೇಶಪಾಂಡೆ ಇತರರು ಇದ್ದರು.