ಸುಧಾರಿತ ಅಂಗಾಂಶ ಕೃಷಿ ಸಸಿ ಬಳಸಲಿ

9manju3
ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಸೋಮವಾರ ಕೆಎಲ್‌ಇ ಕೆವಿಕೆ, ಕೃಷಿ ಇಲಾಖೆ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಜರುಗಿತು. ಮಂಜುನಾಥ ಚೌರಡ್ಡಿ, ಸುವರ್ಣಾ ಲೋಹಾರ, ಡಾ.ಆನಂದ ಕುಮಾರ ಇತರರಿದ್ದರು.
Published on

ಬೆಳಗಾವಿ: ಅಂಬೇವಾಡಿ ಗ್ರಾಮದ ಸುತ್ತಮುತ್ತ ಕಬ್ಬು ಬೆಳೆಗಾರರು ಹೆಚ್ಚಾಗಿದ್ದು, ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಒ-92005 ಕಬ್ಬಿನ ತಳಿ ಸುಧಾರಿತ ಅಂಗಾಂಶ ಕೃಷಿ ಸಸಿಗಳನ್ನು ಬಳಕೆ ಮಾಡಿದಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಿದೆ ಎಂದು ಕೆಎಲ್‌ಇ ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಅಂಬೇವಾಡಿ ಗ್ರಾಮದಲ್ಲಿ ಸೋಮವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮತ್ತಿಕೊಪ್ಪ ಕೆಎಲ್‌ಇ ಕೆವಿಕೆ, ಕೃಷಿ ಇಲಾಖೆ, ಇಫ್ರೋ ಗೊಬ್ಬರ ಸಂಸ್ಥೆ ಮತ್ತು ಸ್ಥಳೀಯ ಗ್ರಾಪಂ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯೆ ಸುವರ್ಣಾ ಲೋಹಾರ, ಡಾ.ಆನಂದಕುಮಾರ, ಆತ್ಮ ಯೋಜನೆಯ ಮಲೀಕ್ ನಾಯಿಕ, ರಾಜಶ್ರೀ ಜೈನ್, ಪ್ರವೀಣ ಯಡಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net