

ದೇವದುರ್ಗ: ಆದಿಗುರು ಶಂಕರಾಚಾರ್ಯರು ಹಿಂದು ಧರ್ಮ ಜಾಗೃತಿಗಾಗಿ ದೇಶಾದ್ಯಂತ ಸಂಚಾರ ಮಾಡಿದ್ದಾರೆ. ಅದ್ವೈತ ಸಿದ್ಧಾಂತ ಪ್ರಚಾರ ಮಾಡಿ ಜನರಿಗೆ ಭಕ್ತಿ ಮಾರ್ಗ ತೋರಿದ್ದಾರೆ ಎಂದು ರಾಜಾಮನೆತನದ ಸಂಸ್ಥಾನದ ರಾಜಾಜೋಶಿ ಪುರೋಹಿತ ತಿರುಮಲ ಆಚಾರ ಹೇಳಿದರು.
ಇದನ್ನೂ ಓದಿ: ಅಹನಾ ಅದ್ವೈತ್ಗೆ ಮಿಸಸ್ ಕಲಾ ತರಂಗ ಪ್ರಶಸ್ತಿ
ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ದೇಶದ ದಶ ದಿಕ್ಕುಗಳಿಗೆ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರಚಾರ ಮಾಡಿದರು. ಜಗತ್ತು ಎರಡಿಲ್ಲ ಎಲ್ಲವೂ ಒಂದೇ ಆಗಿರುತ್ತದೆ. ಪಾರಮಾರ್ಥಿಕವಾಗಿ ಮೇಲು ಕೀಳು ಎಂಬ ಭೇದ ಭಾವ ಇರುವುದಿಲ್ಲ.
ಜಗತ್ತು ಎಲ್ಲವೂ ಒಂದೇ ನಾವೆಲ್ಲರೂ ಒಂದೇ ಅದ್ವೈತ ಸಿದ್ಧಾಂತ ಉಳಿಸಬೇಕು. ಭಕ್ತಿ ಮಾರ್ಗವೊಂದೇ ಮಾನವನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆಂದು ಸಾರಿದರು ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ಬಸವರಾಜ್ ಪೂಜಾರಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಪ್ರಮುಖರಾದ ಶರಣಯ್ಯ ಸ್ವಾಮಿ, ದೇವರಡ್ಡಿ, ತಿಮ್ಮಪ್ಪ ದೇವರು, ಶ್ಯಾಮರಾವ್ ಕುಲಕರ್ಣಿ, ಕೆ.ವೆಂಕಟೇಶ್, ಅನಿಲ್ ಕುಮಾರ್, ಸೃಜನ್, ಶ್ರೀನಿವಾಸ ಇತರರಿದ್ದರು.