ಕಲಬೆರಕೆ ಹಾಲು ತಯಾರಿ ಘಟಕದ ಮೇಲೆ ದಾಳಿ

24Athani-2-Web
ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ ಡಿಸಿಐಬಿ ಪೊಲೀಸರು ಓರ್ವನನ್ನು ಬಂಧಿಸಿ ಕಲಬೆರೆಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Published on

ಅಥಣಿ/ಕೊಕಟನೂರ: ತಾಲೂಕಿನ ಝಂಜರವಾಡ ಗ್ರಾಮದ ಹೊರವಲಯದಲ್ಲಿರುವ ಕಲ ಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಸೋಮವಾರ ಡಿಸಿಐಬಿ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದು ಕಲಬೆರಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಮಾರ್ಗದರ್ಶನದಂತೆ ಮಾಹಿತಿ ಆಧರಿಸಿ ಡಿಸಿಐಬಿ ಘಟಕದ ಪಿಎಸ್‌ಐ ನಿಂಗನಗೌಡ ಪಾಟೀಲ ನೇತೃತ್ವದ ಪೊಲೀಸರ ತಂಡ ಝಂಜರವಾಡ ಗ್ರಾಮದ ಹೊರವಲಯದ ತೋಟದ ಶೆಡ್‌ನಲ್ಲಿ ಕಲಬೆರಕೆ ಹಾಲು ತಯಾರಿಸುತ್ತಿದ್ದ ಸ್ಥಳೀಯ ನಿವಾಸಿ ಉಮರಅಲಿ ಅನ್ಸಾರಿ (23) ಎಂಬಾತನನ್ನು ಬಂಧಿಸಿದ್ದಾರೆ. ಹಾಲು ತಯಾರಿಕೆಗೆ ಉಪಯೋಗಿಸುತ್ತಿದ್ದ 35ಲೀ.ನ 19 ಪ್ಲಾಸ್ಟಿಕ್ ಕ್ಯಾನ್, ಹಾಲು ತಯಾರಿಸಲು ಬಳಸುವ ಕೆಮಿಕಲ್ ಮಿಶ್ರಿತ ಪೌಡರ್‌ನ 80 ಕೆ.ಜಿ.ಯ 3ಚೀಲ, 150 ಲೀ.ನಷ್ಟು ಬಿಳಿ ಬಣ್ಣದ ದ್ರಾವಣ ತುಂಬಿದ ಒಂದು ಪ್ಲಾಸ್ಟಿಕ್ ಬ್ಯಾರಲ್, ರುಚಿ ಗೋಲ್ಡ್ 1ಲೀಟರ್ ಪಾಮೋಲಿನ್ ಎಣ್ಣೆಯ 90 ಪ್ಯಾಕೆಟ್, ಅಲ್ಯುಮಿನಿಯಂ ಮಾಪನ, ಒಂದು ಮಿಕ್ಸರ್ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net