

ಬೆಳಗಾವಿ : ಪರೀಕ್ಷೆಗೆ ನೋಂದಾಯಿಸಿಕೊಮಡೆಲ್ಲ ಕಲಿಕಾರ್ಥಿಗಳು ಕಡ್ದಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಮಾಡುವಲ್ಲಿ ಬೋಧಕರ ಪಾತ್ರ ಮಹತ್ವದ್ದಾಗಿದ್ದು, ಬೋಧಕರು ಕಲಿಕಾರ್ಥಿಗಳ ಮನವೊಲಿಸಿ ಎಲ್ಲರೂ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಂ.ಜಯಶ್ರೀ ಹೇಳಿದರು.
ಚವ್ವಾಟಗಲ್ಲಿಯಲ್ಲಿನ ಸರ್ಕಾರಿ ಮರಾಠಿ ಶಾಲೆ ನಂ-5ರಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಜಿಲ್ಲಾ ವಲಯ ಲಿಂಕ್ ಅನುದಾನದಡಿ ಮತ್ತು ಸಾವಿರ ಗ್ರಾಮ ಪಂಚಾಯತಗಳ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮಗಳ ಪರೀಕ್ಷೆಯ ತಯಾರಿ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪರೀಕ್ಷಾ ಸಂಧರ್ಭದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕಾರ್ಯಗಳು, ಪ್ರಶ್ನೆ ಪತ್ರಿಕೆ ತಯಾರಿ, ನಾಮಿನಲ್ ರೂಲ್ ಸಿದ್ಧಪಡಿಸುವುದು, ಪ್ರವೇಶಪತ್ರ ಸಿದ್ಧಪಡಿಸಿ ವಿತರಿಸುವುದು, ಪರೀಕ್ಷಾ ಕೇಂದ್ರಗಳ ಗುರುತಿಸುವಿಕೆ, ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರ ನೇಮಕ, ಮಾರ್ಗಾಧಿಕಾರಿಗಳ ನೇಮಕದ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಡಯಟ್ ಪ್ರಾಚಾರ್ಯ ಎಸ್.ಡಿ.ಗಾಂಜಿ ಸೇರಿದಂತೆ ಡಯಟ್‌ನ ಹಿರಿಯ ಉಪನ್ಯಾಸಕರು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ತಾಲ್ಲೂಕಾ ನೋಡಲ್ ರವರಾದ ಃಖಅ ಯವರು, ಃಖ,ಯವರು ಹಾಗೂ ಕಾರ್ಯಕ್ರಮ ಸಹಾಯಕರು ಸಭೆಯಲ್ಲಿ ಭಾಗವಹಿಸಿದ್ದರು.