ಸಂಜೀವಿನಿ ಯೋಜನೆಗೆ ಪ್ರೋತ್ಸಾಹ

Alavandi Bhandavya Sanjeevini Sabhe
ಅಳವಂಡಿ ಬಾಂಧವ್ಯ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಗಣ್ಯರು ಚಾಲನೆ ನೀಡಿದರು.
Published on

ಅಳವಂಡಿ: ಮಹಿಳೆಯರ ಆರ್ಥಿಕ ಅಭಿವೃದ್ಧಿ ಹೊಂದುವ ಸಲುವಾಗಿ ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಲು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ವೆಂಕಟೇಶ ತಿಳಿಸಿದರು.

ಗ್ರಾಮದ ಬಾಂಧವ್ಯ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಯೋಜನೆಯ ನಿಯಮಾನುಸಾರ ಸಮುದಾಯ ಬಂಡವಾಳ ನಿಧಿಯನ್ನು ಸಾಲದ ರೂಪದಲ್ಲಿ ನೀಡಿ ಉತ್ತೇಜಿಸಿ ಉದ್ಯಮಿಗಳಾಗಿಸಲಾಗುವುದು. ಕೌಶಲ ತರಬೇತಿಗಳಾದ ಜ್ಯೂಟ್‌ಬ್ಯಾಗ್, ಟೈಲರಿಂಗ್, ಬ್ಯೂಟಿ ಪಾರ್ಲರ್ ತರಬೇತಿ ಹೀಗೆ ಹಲವಾರು ತರಬೇತಿಗಳನ್ನು ನೀಡಿ, ಸಂಜೀವಿನಿ ಯೋಜನೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಒಕ್ಕೂಟ ಅಧ್ಯಕ್ಷೆ ಜಗದೀಶ್ವರಿ, ಉಪಾಧ್ಯಕ್ಷೆ ಫಕೀರಾಭಿ, ಕಾರ್ಯದರ್ಶಿ ಜಯಶ್ರೀ, ಉಪಕಾರ್ಯದರ್ಶಿ ಬಸಮ್ಮ, ಎಂಬಿಕೆ ಮಲ್ಲಮ್ಮ, ಎಲ್ಸಿಆರ್‌ಪಿ ಗೀತಾ, ಪ್ರತಿಭಾ, ಹಾಗೂ ಸಲಿಮಾ, ರೇಖಾ, ಯಲ್ಲಮ್ಮ, ಕಾವೇರಿ, ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net