ಸಸಿಗಳ ದತ್ತು ಪಡೆದ ಚಿಣ್ಣರು

14bdvt2
ಭದ್ರಾವತಿಯ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ಸಸ್ಯ ಶ್ಯಾಮಲಾ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
Published on

ಭದ್ರಾವತಿ: ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸ್ಯ ಶ್ಯಾಮಲಾ ಯೋಜನೆಯಡಿ 80ಕ್ಕೂ ಹೆಚ್ಚು ಸಸಿ ನೆಡಲಾಯಿತು. ಅವುಗಳನ್ನು ಪೋಷಿಸಿ, ಬೆಳೆಸಲು ಮಕ್ಕಳಿಗೆ ದತ್ತು ನೀಡಲಾಯಿತು.

ಮುಂದಿನ ದಿನಗಳಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬೀಜ ತಯಾರಿಕೆ (ಸೀಡ್‌ಬಾಲ್), ಕೋಟಿ ವೃಕ್ಷ ಆಂದೋಲನ, ಕಾಡ್ಗಿಚ್ಚು ತಡೆಯುವಿಕೆ ಇತರ ಕಾರ್ಯಕ್ರಮ ನಡೆಸಲು ಕಾರ್ಯದರ್ಶಿ ಲಯನ್ ದಿವಾಕರ್ ವಿನಂತಿಸಿದರು.
ಉಪವಲಯ ಅರಣ್ಯಾಧಿಕಾರಿಗಳಾದ ಬಿ.ಆರ್.ದಿನೇಶ್‌ಕುಮಾರ್, ಶಫಿಉಲ್ಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಧ್ಯಕ್ಷ ಬಿ.ಸಿದ್ಧಬಸಪ್ಪ, ಉಪಪ್ರಾಚಾರ್ಯ ಹಿರಿಯಪ್ಪ, ದಿವಾಕರ್, ಹೆಬ್ಬಂಡಿ ನಾಗರಾಜ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ ಇತರರಿದ್ದರು. ರಂಗಪ್ಪ ಸ್ವಾಗತಿಸಿದರು. ಲೀಲಾವತಿ ಪ್ರಾಸ್ತಾವಿಕ ನುಡಿಗಳ್ನಾಡಿದರು. ಆಂಜನೇಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net