ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ

20-nvl-4 SNEHA SAMMELANA
Published on

ನವಲಗುಂದ: ಪ್ರತಿಯೊಬ್ಬರೂ ಸಿಡಿಲ ಸಂತ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರ ಅನಯಾಯಿ ಶ್ರೀಧರ ಲೋನಕರ ಹೇಳಿದರು.

ಪಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಧಾರವಾಡದ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವೇಕ ಭಾರತ ಕಲ್ಪನೆ ಕುರಿತು ಭಾಷನ ಸ್ಪರ್ಧೆಯಲ್ಲಿ ಅವರು ಉಪನ್ಯಾಸ ನೀಡಿದರು. ವಿವೇಕಾನಂದರ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿ ಹೊಂದಿದ್ದರು. ಅವರ ಕನಸಿನಂತೆ ಸದೃಢ ಭಾರತ ನಿರ್ವಿುಸಲು ಸಾಧ್ಯವಾಗಲಿದೆ ಎಂದರು.

ಪ್ರಾಂಶುಪಾಲ ಡಾ.ಎಂ.ಬಿ. ಬಾಗಡಿ ಮಾತನಾಡಿದರು. ಭಾಷಣ ಸ್ಪರ್ಧೆಯಲ್ಲಿ ನಿವೇದಿತಾ ಮರಿಗೌಡರ ಪ್ರಥಮ, ಪ್ರೀತಿ ಕಲ್ಲನಗೌಡರ ದ್ವಿತೀಯ ಹಾಗೂ ಪ್ರವೀಣ ಹಿರೇಮಠ ತೃತೀಯ ಹಾಗೂ ಮಲ್ಲಮ್ಮ ಶಲವಡಿ ಚತುರ್ಥ ಸ್ಥಾನ ಪಡೆದುಕೊಂಡರು.

ಡಾ. ಸುಗುಣ ಡಿ.ವಿ., ಬಿ.ವಿ. ಏಣಗಿ, ಡಾ.ವೈ.ಎನ್. ಗುಳುಗಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net