

ವಿಜಯಪುರ : ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಸಹೋದರತೆ ಮತ್ತು ಸಾಮರಸ್ಯ ಸಾರಿದ ಮಹಾನ್ ಪುರುಷರು. ಯುವಜನತೆ ಅಂತಹ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕುಲಪತಿ ಡಾ. ಆರ್.ಎಸ್. ಮುಧೋಳ ಹೇಳಿದರು.
ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತಿ ಅಂಗವಾಗಿ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಅಲೈಡ್ ಹೆಲ್ತ್ ಸೈನ್ಸ್ ಡೀನ್ ಡಾ. ಎಸ್.ವಿ. ಪಾಟೀಲ, ಸ್ಟುಡೆಂಟ್ ಅಫೇರ್ಸ್ ಡೀನ್ ಡಾ. ಆನಂದ ಅಂಬಲಿ, ಚೀಫ್ ವಾರ್ಡನ್ ಡಾ. ಉದಯಕುಮಾರ ನುಚ್ಚಿ, ಡಾ. ಸುರೇಖಾ ಹಿಪ್ಪರಗಿ, ಡಾ. ವಿಜಯಕುಮಾರ ವಾರದ, ಡಾ. ಶ್ರೀನಿವಾಸ ರಾಯ್ಕರ, ರಕ್ತನಿಧಿ ಉಸ್ತುವಾರಿ ಡಾ. ಸತೀಶ ಅರಕೇರಿ, ಸತೀಶ ಪಾಟೀಲ ಮತ್ತಿತರರಿದ್ದರು.