ಮಹಾವೀರರ ಬೋಧನೆ ಅಳವಡಿಸಿಕೊಳ್ಳಿ

Adopt the teaching of the Mahavira
ರಬಕವಿ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಭಗವಾನ ಮಹಾವೀರರ ಜಯಂತಿ ಅಂಗವಾಗಿ ಮೆರವಣಿಗೆ ಜರುಗಿತು. ಗಣಪತರಾವ ಹಜಾರೆ, ಸತೀಶ ಹಜಾರೆ, ಧರೆಪ್ಪ ಉಳ್ಳಾಗಡ್ಡಿ, ಪ್ರಸನ್ನ ಹಜಾರೆ, ಡಾ. ಅಭಿನಂದನ ಡೋರ್ಲೆ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಮಹಾವೀರರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ಜೈನ ಸಮಾಜದ ಹಿರಿಯ ಗಣಪತರಾವ ಹಜಾರೆ ಹೇಳಿದರು.

ಮಹಾವೀರ ಜಯಂತಿ ಅಂಗವಾಗಿ ಮೆರವಣಿಗೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಜೈನ ಧರ್ಮದ 24 ನೇ ಮತ್ತು ಕೊನೆಯ ತೀಥರ್ಂಕರರೆನ್ನುವ ಹೆಮ್ಮೆಗೆ ಪಾತ್ರರಾದ ಮಹಾವೀರರು ಜೈನ ಧರ್ಮದ ಮೂಲ ತತ್ವಗಳನ್ನು ಸ್ಥಾಪಿಸಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯನ್ನು ಅವರ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.

ಮುಖಂಡ ಸತೀಶ ಹಜಾರೆ ಮಾತನಾಡಿ, ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ, ಸತ್ಯ, ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ಬೋಧನೆಗಳು ಇಂದಿಗೂ ಸ್ಫೂರ್ತಿಯ ಮೂಲವಾಗಿವೆ ಎಂದರು.

ರಬಕವಿ ಶಂಕರಲಿಂಗ ದೇವಸ್ಥಾನದ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭಗವಾನರ ಮೂರ್ತಿ ಮೆರವಣಿಗೆ ಮಾಡಲಾಯಿತು. ನಂತರ ನಗರದ ಹೊರವಲಯದಲ್ಲಿರುವ ಬಸ್ತಿಯಲ್ಲಿ ಸಂಪನ್ನಗೊಳಿಸಲಾಯಿತು.

ಜೈನ ಸಮಾಜದ ಮುಖಂಡರಾದ ಅಭಯ ಯಂಡೋಳಿ, ಡಾ. ಅಭಿನಂದನ ಡೋರ್ಲೆ, ಪ್ರವೀಣ ಹಜಾರೆ, ಶ್ರೀಮಂತ ಕನಗೊಂಡ, ಬಿ.ಡಿ. ನೇಮಗೌಡ, ಪದ್ಮಾವತಿ ಹಜಾರೆ, ಭರತೇಶ ಯಲ್ಲಟ್ಟಿ, ಪ್ರಭಾವತಿ ಹಜಾರೆ, ಡಾ. ಇಂದುಮತಿ ಯಂಡೋಳಿ, ಬಲದೇವ ಹೊನಗೌಡರ, ಪಿ.ಓಸ್ವಾಲ, ಕೆ.ಡಿ. ಮಾನಗಾಂವಿ, ಸ್ವಾತಿ ನೇಮಗೌಡ, ಪ್ರಸನ್ನ ಹಜಾರೆ, ಧರೆಪ್ಪ ಉಳ್ಳಾಗಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net