ರಾಮ ಮಂದಿರ ನಿರ್ಮಾಣದ ಜತೆಗೆ ರಾಮನ ಗುಣಗಳನ್ನು ಅಳವಡಿಸಿಕೊಳ್ಳಿ

27kls1
ಆಸರೆ ೌಂಡೇಷನ್‌ನಿಂದ ಸಾರ್ವಜನಿಕ ಸೇವೆಗಾಗಿ ಅಂಬುಲೆನ್ಸ್ ನ್ನು ವಿಶ್ವಮಾನವ ಸೇವಾ ಟ್ರಸ್ಟ್‌ಗೆ ಹಸ್ತಾಂತರ ಮಾಡಲಾಯಿತು. ಕೆ.ಕೆ.ಬಾಲಕೃಷ್ಣ ಭಟ್, ಜಿ.ಕೆ.ಮಂಜಪ್ಪಯ್ಯ, ನುಗ್ಗಿ ಮಂಜುನಾಥ್ ಇದ್ದರು.
Published on

ಕಳಸ: 10 ಬ್ರಹ್ಮರಥ ಕೊಡುವುದಕ್ಕಿಂತ ದುಖಃದಲ್ಲಿರುವವರಿಗೆ ಒಂದು ಅಂಬುಲೆನ್ಸ್ ಕೊಡುವುದು ಉತ್ತಮ. ಗೋಪುರಗಳನ್ನು ಕಟ್ಟಿ ದೇವರುಗಳನ್ನು ತೃಪ್ತಿ ಪಡಿಸುವುದಕ್ಕಿಂತ ಅಗತ್ಯ ಇದ್ದವರಿಗೆ ಮನೆ ಕಟ್ಟಿಕೊಡುವುದು ನಿಜವಾಗಿ ದೇವರಿಗೆ ಕಟ್ಟುವ ದೇವಸ್ಥಾನಕ್ಕೆ ಸಮ ಎಂದು ಅವಧೂತ ವಿನಯ ಗುರೂಜಿ ಹೇಳಿದರು.
ಆಸರೆ ೌಂಡೇಷನ್‌ನಿಂದ ಶುಕ್ರವಾರ ರಾತ್ರಿ ನಡೆದ ಸಾರ್ವಜನಿಕ ಸೇವೆಗಾಗಿ ಅಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನಗಳು ಬೆಳೆಯುತ್ತಿರುವುದು ಹಣವಂತರಿಂದಲ್ಲ ಬಡವರಿಂದ. ಲೋನ್ ಟ್ಯಾಕ್ಸ್ ಕಟ್ಟುವುದು ಶ್ರೀಮಂತರಲ್ಲ ಬಡವರು ಎಂದರು.
100 ಯಜ್ಞ ಮಾಡುವುದಕ್ಕಿಂತ ಉದ್ಯೋಗ ಸೃಷ್ಟಿ ಮಾಡಿ ನಿರುದ್ಯೋಗ ಹೋಗಲಾಡಿಸುವುದು ಉತ್ತಮ. ನಾವು ದೇವರ ಕಥೆ ಹೇಳುತ್ತೇವೆ ಆದರೆ ಯಾರೂ ದೇವರಂತೆ ಬದುಕುವ ಪ್ರಯತ್ನ ಮಾಡುತ್ತಿಲ್ಲ. ಅಯೋಧ್ಯೆ ರಾಮ ಮಂದಿರ ಕಟ್ಟಿದರೆ ಸಾಲುವುದಿಲ್ಲ. ಬದಲಾಗಿ ರಾಮನ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಭಾಷಣದಿಂದ ತಲೆ ಎತ್ತಿ ನಡೆಯಲು ಸಾಧ್ಯವಿಲ್ಲ. ಆದಾಯ ಸೃಷ್ಟಿ ಮಾಡಿದರೆ ಸ್ವಾಲಂಬನೆ ಸ್ವಾಭಿಮಾನ ಬರುತ್ತದೆ ತಲೆ ಎತ್ತಿ ನಡೆಯುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net