ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

ಅಳವಂಡಿ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಹಿರೇಶಾಂತವೀರ ಸ್ವಾಮೀಜಿ ಮಾತನಾಡಿದರು. ಶ್ರೀಮರುಳಾರಾದ್ಯ ಶಿವಾಚಾರ್ಯರು, ಶ್ರೀ ಚನ್ನವೀರಸ್ವಾಮಿ ಇದ್ದರು.
ಅಳವಂಡಿ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಹಿರೇಶಾಂತವೀರ ಸ್ವಾಮೀಜಿ ಮಾತನಾಡಿದರು. ಶ್ರೀಮರುಳಾರಾದ್ಯ ಶಿವಾಚಾರ್ಯರು, ಶ್ರೀ ಚನ್ನವೀರಸ್ವಾಮಿ ಇದ್ದರು.
Published on

ಅಳವಂಡಿ: ಮಹಾತ್ಮರ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಹೂವಿನಹಡಗಲಿಯ ಡಾ.ಹಿರೇಶಾಂತವೀರ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಯಕ ಹಾಗೂ ಪರಿಶ್ರಮದ ಬದುಕು ಕಟ್ಟಿಕೊಳ್ಳಬೇಕು. ಶರಣರ ತತ್ವಾದರ್ಶಗಳು ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಪ್ರಾಮಾಣಿಕತೆ, ಸಂಸ್ಕಾರ, ಶಿಸ್ತು ಮನುಷ್ಯನ ಏಳಿಗೆಗೆ ಸಹಕಾರಿಯಾಗಲಿವೆ. ಸಮಾಜಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಿ ಎಂದರು.

ಶ್ರೀ ಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಚನ್ನವೀರಸ್ವಾಮಿ ಹಿರೇಮಠ, ಈಶರಯ್ಯ ಹಲಸಿನಮಠ, ಕಳಕಯ್ಯ ರವಿಶಂಕರಸ್ವಾಮಿ, ರಾಜೇಶ ಸ್ವಾಮಿ, ರವಿಶಂಕರ ಸ್ವಾಮಿ, ವೀರಭದ್ರಯ್ಯ, ಮಂಜುನಾಥ, ಅಶೋಕ ಬಂಡಿ, ಅನ್ವರ ಗಡಾದ, ಬೀಮರಡ್ಡೆಪ್ಪ, ದೇವಪ್ಪ, ರಮೇಶ, ಗಿರೀಶ, ಸಿದ್ದಣ್ಣ, ಗವಿಸಿದ್ದರಡ್ಡಿ, ಈಶಪ್ಪ, ಬಸಣ್ಣ, ಗವಿಸಿದ್ದಪ್ಪ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net