ಮಹಾತ್ಮರ ತತ್ವಾದರ್ಶ ಅಳವಡಿಕೊಳ್ಳಿ

Adopt the philosophy of the greats.
ಬನಹಟ್ಟಿಯ ವಿಠ್ಠಲ ಮಂದಿರದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು, ಕುಮಾರ ಬಕರೆ, ನಾಗಪ್ಪ ಬಕರೆ, ಪ್ರಭಾಕರ ಮೂಳೆದ ಇದ್ದರು.
Published on

ರಬಕವಿ/ಬನಹಟ್ಟಿ: ಸಾಧು-ಸಂತರು, ದಾರ್ಶನಿಕರು, ಮಹಾತ್ಮರು ತಮ್ಮ ಜೀವನವನ್ನು ಸಮಾಜೋದ್ಧಾರಕ್ಕೆ ಮೀಸಲಿರಿಸಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಬದ್ಧರಾಗಿರಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿಯ ನಾಮದೇವ ಶಿಂಪಿ ಸಮಾಜದ ವಿಠ್ಠಲ ಮಂದಿರದ ಕಚೇರಿ ಕಟ್ಟಡ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂಚಗೇರಿ ಅಧ್ಯಾತ್ಮ ಸಂಪ್ರದಾಯ ಮಾತ್ರವಲ್ಲದೆ ಸಾಮೂಹಿಕ ಬೇಸಾಯ ಪದ್ಧತಿ, ಗೋ ರಕ್ಷಣಾ, ಸ್ವಾತಂತ್ರೃ ಚಳವಳಿ ಸೇರಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದೆ ಎಂದರು.

ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಮಾತನಾಡಿ, ಸಮಾಜಕ್ಕೆ ಒಳಿತಾಗುವ ಎಲ್ಲ ಕಾರ್ಯಗಳಲ್ಲಿ ಇಂಚಗೇರಿ ಸಂಪ್ರದಾಯದ ಕೊಡುಗೆ ಅಪಾರ ಎಂದರು.

ನಗರಸಭಾ ಸದಸ್ಯ ಪ್ರಭಾಕರ ಮೂಳೇದ, ಪುಂಡಲೀಕ ಪಾಲಭಾಂವಿ, ಪ್ರಭು ಕೋಪರ್ಡೆ, ಅರವಿಂದ ಮಗದುಮ್ಮ, ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಕುಮಾರ ಬಕರೆ, ನಾಗಪ್ಪ ಬಕರೆ, ಮಹಾನಿಂಗ ಹಾಶೀಲಕರ, ಮಹಾದೇವ ಭಸ್ಮೆ, ವಿಜಯ ಕೋಪರ್ಡೆ, ಸುರೇಶ ಕೋಪರ್ಡೆ, ಮಾಧವಾನಂದ ಕೋಪರ್ಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net