ಮಹಾವೀರರ ತತ್ವಾದರ್ಶ ಅಳವಡಿಸಿಕೊಳ್ಳಿ

Adopt the philosophy of Mahavira
ಇಳಕಲ್ಲನಲ್ಲಿ ಮಹಾವೀರ ಜಯಂತಿ ಅಂಗವಾಗಿ ಆಯೊಜಿಸಿದ್ದ ಭಾವಚಿತ್ರ ಮೆರವಣಿಗೆಗೆ ಗುರುಮಹಾಂತ ಶ್ರೀಗಳು ಚಾಲನೆ ನೀಡಿದರು. ಸಜ್ಜನರಾಜ ಮೆಹತಾ, ರಾಜು ಬೋರಾ, ಗೌತಮ ಬೋರಾ, ವಿಶಾಲ ಕಠಾರಿಯಾ, ಇಂದ್ರಜಿತ್ ಕಠಾರಿಯಾ, ದೀಲೀಪ ಭಂಡಾರಿ, ಮಾಣಿಕ್ ಭಂಡಾರಿ ಮತ್ತಿತರರಿದ್ದಾರೆ.
Published on

ಇಳಕಲ್ಲ(ಗ್ರಾ): ಜಗತ್ತಿನಲ್ಲಿ ಎಲ್ಲರೂ ಸರಿ ಸಮಾನರು. ಇಲ್ಲಿ ಯಾರೊಬ್ಬರಿಗೂ ಹಿಂಸೆ ನೀಡದೆ ಜೀವಿಸಬೇಕು ಎಂದು ಗುರುಮಹಾಂತ ಶ್ರೀಗಳು ಹೇಳಿದರು.

ನಗರದ ಮಾರವಾಡಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಮಹಾವಿರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾವೀರರ ತತ್ವಾದರ್ಶ ಅಳವಡಿಸಿಕೊಂಡಾಗ ಜಗತ್ತು ಸ್ವರ್ಗವಾಗುತ್ತದೆ ಎಂದರು.

ಜೈನ ಸಮಾಜದ ಸಜ್ಜನರಾಜ ಮೆಹತಾ, ರಾಜು ಬೋರಾ, ಗೌತಮ ಬೋರಾ, ವಿಶಾಲ ಕಠಾರಿಯಾ, ಇಂದ್ರಜಿತ್ ಕಠಾರಿಯಾ, ದೀಲೀಪ ಭಂಡಾರಿ, ಮಾಣಿಕ್ ಭಂಡಾರಿ, ದೀಲೀಪ್ ಸುರಾಣಾ , ಸಂದೀಪ ಮೆಹ್ತಾ, ನವೀನ ಮೆಹ್ತಾ , ದೀಲೀಪ್ ಬೋರಾ, ನವೀನ ಗೆಲ್ಡಾ ಮತ್ತಿತರರಿದ್ದರು.

ಮೆರವಣಿಗೆಯು ವೆಂಕಟೇಶ ದೇವಸ್ಥಾನದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net