ಪೂರ್ವಜರ ಜೀವನ ಶೈಲಿ ಅಳವಡಿಸಿಕೊಳ್ಳಿ

ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗನಾಥ ಉದ್ಘಾಟಿಸಿದರು. ಮಕ್ಕಳ ರಕ್ಷಣಾ ಘಟಕದ ಶಿವಲೀಲಾ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್.ನಾಯಕ, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕರ, ಕಿರಿಯ ನ್ಯಾಯಾಧೀಶ ಸಂಜಯ ಕುಮಾರ್, ಪಪಂ ಸದಸ್ಯೆ ಬಸಮ್ಮ ಬಣಕಾರ ಇತರರಿದ್ದರು.
ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗನಾಥ ಉದ್ಘಾಟಿಸಿದರು. ಮಕ್ಕಳ ರಕ್ಷಣಾ ಘಟಕದ ಶಿವಲೀಲಾ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್.ನಾಯಕ, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕರ, ಕಿರಿಯ ನ್ಯಾಯಾಧೀಶ ಸಂಜಯ ಕುಮಾರ್, ಪಪಂ ಸದಸ್ಯೆ ಬಸಮ್ಮ ಬಣಕಾರ ಇತರರಿದ್ದರು.
Published on

ಯಲಬುರ್ಗಾ: ಮಹಿಳೆಯರು ಆರೋಗ್ಯದಿಂದ ಇರಲು ಪೂರ್ವಜರ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗನಾಥ ಹೇಳಿದರು.

ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ವಜರಲ್ಲಿ ಅಂಬಲಿ, ಜೋಳದ ರೋಟ್ಟಿ ಊಟದ ಪದ್ಧತಿ ಉತ್ತಮವಾಗಿತ್ತು. ಇಂದು ಫ್ರೀಡ್ಜ್, ಫಿಲ್ಟರ್ ನೀರು ಕುಡಿಯುವುದರಿಂದ ದೇಹ ಹಾಗೂ ತಿನ್ನುವ ಆಹಾರಗಳು ಮಾಲಿನ್ಯವಾಗಿವೆ. ಯುರಿಯಾ ರಸ ಗೊಬ್ಬರ ಹಾಗೂ ಪಾಲೀಶ್ ಅಕ್ಕಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ರಾಸಾಯನಿಕ ಸಿಂಪಡಿಸಿದ ಆಹಾರ ಸೇವನೆಯಿಂದ ದೇಹ ಆರೋಗ್ಯವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಅಡುಗೆ ಮನೆಯೇ ವೈದ್ಯ ಶಾಲೆಯಾಗಬೇಕು. ಮೊಳಕೆ ಕಾಳು, ತರಕಾರಿ ಸೇವನೆ ಮಾಡಬೇಕು ಎಂದರು.

ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ಮಾತನಾಡಿ, ಬಾಲ್ಯವಿವಾಹ ಮತ್ತು ಬಾಲ್ಯಗರ್ಭಿಣಿಯರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಸೆ.22 ರಂದು ಗ್ರಾಪಂ ಮಟ್ಟದಲ್ಲಿ ಬಾಲ್ಯವಿವಾಹ ಹಾಗೂ ಬಾಲ್ಯಗರ್ಭಾವಸ್ಥೆ ತಡೆಯುವ ಕುರಿತು ಜಾಗೃತಿ ಮೂಡಿಸಬೇಕು. ಪಾಲಕರು ಮಕ್ಕಳು ಯಾವ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು. ಮಕ್ಕಳು ಆರೋಗ್ಯ ಹಾಗೂ ಸುರಕ್ಷತೆ ಕಾಳಜಿ ವಹಿಸಿ ಎಂದು ತಿಳಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್.ನಾಯಕ, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕರ, ಕಿರಿಯ ನ್ಯಾಯಾಧೀಶ ಸಂಜಯ ಕುಮಾರ್, ಪಪಂ ಸದಸ್ಯೆ ಬಸಮ್ಮ ಬಣಕಾರ, ವಕೀಲರಾದ ಎ.ಎನ್.ಪಾಟೀಲ್, ಎನ್.ಬಸವರಾಜ, ಲೋಕೇಶ ಹನಮಂತ ಬಂಗಾಳಿ, ರಾಘವೇಂದ್ರ, ಅಂಗನವಾಡಿ ಮೇಲ್ವಿಚಾರಕಿಯರಾದ ಸುಮಾ ಕರಿಗಾರ, ಜಯಲಕ್ಷ್ಮೀ ಮೇಣಸಿನಕಾಯಿ, ಗಿರಿಜಾ ಕಡಿವಾಲರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net