

ಜಮಖಂಡಿ: ಬುದ್ಧನ ಮಾರ್ಗದರ್ಶನ ಸರ್ವಕಾಲಕ್ಕೂ ಶ್ರೇಷ್ಠವಾಗಿವೆ. ಅವರ ಆದರ್ಶಗಳನ್ನು ಎಲ್ಲರು ಪಾಲಿಸಬೇಕು ಎಂದು ಎಸಿ ಶ್ವೇತಾ ಬೀಡಿಕರ ಹೇಳಿದರು.
ನಗರದ ತಾಲೂಕಾ ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡ ಯಮನಪ್ಪ ಗುಣದಾಳ ಮಾತನಾಡಿ, ಸುಮಾರು 2500 ವರ್ಷಗಳ ಹಿಂದೆ ಯಾವುದೆ ಟೆಕ್ನಾಲಜಿ ಇಲ್ಲದ ಕಾಲ ಘಟ್ಟದಲ್ಲಿ ಬುದ್ಧರ ಸಂದೇಶಗಳು ನೂರಾರು ದೇಶಗಳಿಗೆ ಮುಟ್ಟಿವೆ. ಅಂದಿನಿಂದ ಇಲ್ಲಿಯವರೆಗೂ ಅವರ ಮಾರ್ಗದರ್ಶಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಎನ್.ಬಿ. ಗಸ್ತಿ, ಪುಟ್ಟು ಪಾನಿ, ಮುತ್ತಣ್ಣ ಮೇತ್ರಿ, ವಕೀಲ ದೊಡಮನಿ, ಶಶಿಕಾಂತ ದೊಡಮನಿ, ಶಿವಾನಂದ ಬಬಲೇಶ್ವರ, ಶಿರಸ್ಥೆದಾರ ಶಶಿಧರ ಚಲವಾದಿ, ಬಸವರಾಜ ಸಿಂಧೂರ ಮತ್ತಿತರರಿದ್ದರು.