ಬಸವಪ್ರಭು ಕೋರೆ ಆದರ್ಶ ಅಳವಡಿಸಿಕೊಳ್ಳಿ

15ckd2.jpg
Published on

ಚಿಕ್ಕೋಡಿ: ಸಮುದಾಯದ ಶ್ರೇಯೊಭಿವೃದ್ಧಿಗಾಗಿ ದುಡಿದ ಸ್ವಾತಂತ್ರ ಹೋರಾಟಗಾರ ಲಿಂ.ಶ್ರೀಮಂತ ಬಸವಪ್ರಭು ಕೋರೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಪ್ರಾಧ್ಯಾಪಕ ಬಿ.ಜಿ.ಜಾವೂರ ಹೇಳಿದರು.

ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಬಿ.ಕೆ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಲಿಂ.ಶ್ರೀಮಂತ ಬಸವಪ್ರಭು ಕೋರೆ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕ ಬಿ.ಜಿ.ಜಾವೂರ ಮಾತನಾಡಿದರು. ಯು.ಆರ್.ರಾಜಪೂತ, ಜೆ.ಎಲ್.ಕದಮ್, ಡಾ.ವಿ.ವಿ.ಮಂಜಲಾಪೂರ, ಪ್ರೊ.ಪಿ.ಪಿ.ಕೋಳಿ ಇತರರಿದ್ದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಮಂತ ಬಸವಪ್ರಭು ಕೋರೆ ಅವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಾಜದ ಉನ್ನತಿಗಾಗಿ ಎಲ್ಲರೂ ಶ್ರಮಿಸಬೇಕು. ಒಳ್ಳೆಯ ಕೆಲಸ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂಬ ಶರಣರ ಮಾತನ್ನು ಚಾಚೂತಪ್ಪದೆ ಅನುಸರಿಸಿದ ಮಹಾತ್ಮರು ಬಸವಪ್ರಭು ಕೋರೆ ಎಂದು ಹೇಳಿದರು.

ಪ್ರೊ.ಯು.ಆರ್.ರಾಜಪೂತ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ, ಶಿಕ್ಷಣ, ದೀನದಲಿತರ ಹಾಗೂ ಸಮಾಜದ ಏಳಿಗೆಗೆ ಬಸವಪ್ರಭು ಕೋರೆ ಅವರು ಜೀವನ ಮುಡಿಪಾಗಿಟ್ಟಿದ್ದರು. ಎಲ್ಲರೂ ಅಂತಹ ಶ್ರೇಷ್ಠ ವ್ಯಕ್ತಿಗಳ ಹಾದಿಯಲ್ಲಿ ಸಾಗಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಜೆ.ಎಲ್.ಕದಮ್, ಐ.ಕ್ಯೂ.ಎ.ಸಿ ಸಂಯೋಜಕ ಡಾ.ವಿ.ವಿ.ಮಂಜಲಾಪೂರ, ಪ್ರೊ.ಪಿ.ಪಿ.ಕೋಳಿ, ಪದ್ಮಶ್ರೀ ಚೌಗಲಾ, ಸಿದ್ದಣ್ಣ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net