ಕೌಶಲ ಅಳವಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿ

3 vikram 9
????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಭಾರತೀಯ ಕಲೆಗಳ ಕೌಶಲ ಅಳವಡಿಸಿಕೊಂಡು ಆಥಿರ್ಕವಾಗಿ ಸಬಲರಾಗುವುದರ ಜತೆಗೆ ಆತ್ಮ ವಿಶ್ವಾಸದಿಂದ ಕುಟುಂಬವನ್ನು ಮುನ್ನಡೆಸಬೇಕು ಎಂದು ರೋಟರಿ ಕ್ಲಬ್​ ಅಸಿಸ್ಟಂಟ್​ ಗವರ್ನರ್​ ಡಾ. ಪಲ್ಲವಿ ದೇಶಪಾಂಡೆ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ನ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಹಾಗೂ ಯಶೋಧಾ ವೆಲ್ಫೇರ್​ ಟ್ರಸ್ಟ್​ ಸಹಯೋಗದಲ್ಲಿ ಏರ್ಪಡಿಸಿರುವ ಕೌಶಲ ತರಬೇತಿ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಚಿನ್ಮಯ ಮಿಷನ್​ ಶಾಲೆ ನಿವೃತ್ತ ಪ್ರಾಂಶುಪಾಲೆ ವರದಾ ಬ್ಯಾಹಟ್ಟಿ ಮಾತನಾಡಿ, ತರಬೇತಿ ಪೂರೈಸಿದ ನಂತರ ಸ್ವಂತ ಉದ್ಯೋಗ ಆರಂಭಿಸಬೇಕು. ನಿಮ್ಮ ಮನಸ್ಥಿತಿ, ಜೀವನದ ಪಥ ಬದಲಾಯಿಸುತ್ತದೆ ಎಂದರು.
ಪ್ರತಿಮಾ ಪ್ರವೀಣ ಮಾತನಾಡಿ, ನಾವು ಕಲಿತ ವಿದ್ಯೆ ನಮ್ಮ ಕೈ ಬಿಡುವುದಿಲ್ಲ. ಇಂದಿನ ದಿನಗಳಲ್ಲಿ ಕೌಶಲ ಭರಿತ ಜನರು ಸಿಗುತ್ತಿಲ್ಲ. ನಾವು ಬೆಳೆದು ಸಮುದಾಯಕ್ಕೆ ಸಹಾಯ ಮಾಡಬೇಕು ಎಂದ ಅವರು, ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದರು.
ಯಶೋಧಾ ವೆಲ್ಫೇರ್​ ಟ್ರಸ್ಟ್​ನ ಟ್ರಸ್ಟಿ ಉಮಾ ಅಗ್ನಿಹೋತ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ. ಎಸ್​, ಯಶೋಧಾ ವೆಲ್ಫೇರ್​ ಟ್ರಸ್ಟಿನ ಮ್ಯಾನೇಜಿಂಗ್​ ಟ್ರಸ್ಟಿ ಡಿ. ಆರ್​. ಅಗ್ನಿಹೋತ್ರಿ, ದಿವ್ಯ ಬ್ಯಾಹಟ್ಟಿ, ಲತಾ ಬಾಕಳೆ, ಮಲ್ಲಪ್ಪ ಹಂಪಣ್ಣವರ, ಮಯೂರ ಜೋಳದ, ಅಭ್ಯರ್ಥಿಗಳು, ಇತರರು ಇದ್ದರು.
ಆನಂದ ಅಗ್ನಿಹೋತ್ರಿ ಸ್ವಾಗತಿಸಿದರು. ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ನ ನಿರ್ವಹಣಾ ಸಮಿತಿ ಸದಸ್ಯ ಗೋಪಾಲಕೃಷ್ಣ ಕಮಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಹೊನ್ನಳ್ಳಿ ನಿರೂಪಿಸಿದರು. ವಿಜಯ ಸತ್ತೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net