ಜೀವನದಲ್ಲಿ ಕೌಶಲ ಅಳವಡಿಸಿಕೊಳ್ಳಿ

1 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಥಿರ್ಗಳು ಜ್ಞಾನದ ಜತೆಗೆ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಕೃವಿವಿ ಕುಲಪತಿ ಡಾ. ಎಸ್​.ವಿ. ಸುರೇಶ ಹೇಳಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಿಪ್ಲೋಮಾ (ಕೃಷಿ/ಅರಣ್ಯ) ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಪ್ರತಿ ಮನುಷ್ಯನಿಗೆ ಸಮನಾದ ಅವಕಾಶಗಳಿವೆ. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಆತ್ಮಸ್ಥೆರ್ಯ, ಆತ್ಮನಂಬಿಕೆ ಬೆಳೆಸಿಕೊಳ್ಳಬೇಕು. ಸತ್ಯ ನಿಷ್ಠೆ ಕಾಪಾಡಿಕೊಳ್ಳಲು ವಿದ್ಯಾಥಿರ್ಗಳು ಜೀವನದಲ್ಲಿ ಪ್ರಯತ್ನಿಸಬೇಕು. ತಾತ್ಕಾಲಿಕವಾಗಿ ಹಿನ್ನಡೆಯಾದರೂ ಒಳ್ಳೆ ಅವಕಾಶಗಳು ಒದಗಿ ಬರುತ್ತವೆ. ಇಂದಿನ ಸಮಾಜದಲ್ಲಿ ಸಂಬಂಧಗಳು ತಿಳಿಯಾಗುತ್ತಿದ್ದು, ಭಾವನಾತ್ಮಕ ಸಂಬಂಧಗಳನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳಬೇಕಿದೆ. ಮನುಷ್ಯನ ಭಾವನೆಗಳಿಗೆ ಬೆಲೆ ಕೊಡಬೇಕು ಎಂದರು.
ಅಧ್ಯತೆ ವಹಿಸಿದ್ದ ಕೃವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ ಮಾತನಾಡಿ, ವಿದ್ಯಾಥಿರ್ಗಳು ಪ್ರಾಮಾಣಿಕವಾಗಿ ಪರಿಶ್ರಮ ಪಟ್ಟಲ್ಲಿ ಯಶಸ್ಸು ಕಂಡಿತ ಸಿಗಲಿದೆ. ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಾಧಾರಿತ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೃವಿವಿ ವ್ಯಾಪ್ತಿಯ 8 ಡಿಪ್ಲೋಮಾ ಕಾಲೇಜುಗಳ 181 ಅಭ್ಯಥಿರ್ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅತೀ ಹೆಚ್ಚು ಅಂಕಗಳಿಸಿದ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ದೀನಸಮುದ್ರ ಗ್ರಾಮದ ಕುಮಾರ ಬಸನಗೌಡ ಅವರಿಗೆ ರುದ್ರಪ್ಪ ಶಿವಪ್ಪ ಕಿರೇಸೂರ ಚಿನ್ನದ ಪದಕ ವಿತರಿಸಲಾಯಿತು.
ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಶ್ರೀನಿವಾಸ ಕೊಟ್ಯಾನ, ಶಿಣ ನಿರ್ದೇಶಕ ಡಾ. ವಿ.ಆರ್​. ಕಿರೇಸೂರ, ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.
ಡಾ. ಆರ್​. ಬಸವರಾಜಪ್ಪ ಸ್ವಾಗತಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು. ಡಾ. ಉಮೇಶ ಮುಕ್ತಾಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net