ಯಂತ್ರಾಧಾರಿತ ಬೇಸಾಯ ಅಳವಡಿಸಿಕೊಳ್ಳಿ

ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಯಾಂತ್ರೀಕೃತ ಭತ್ತ ನಾಟಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎನ್.ಮಂಜುನಾಥ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಸಿ.ಎ.ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಕೆ.ಸೋಮಶೇಖರ, ರೈತರಾದ ಹನುಮಂತಪ್ಪ, ಗಾದಿಲಿಂಗಪ್ಪ ಇತರರಿದ್ದರು.

Published on

ಕಂಪ್ಲಿ: ರೈತರು ಸಾಂಪ್ರದಾಯಿಕ ಹಾಗೂ ಯಂತ್ರಾಧಾರಿತ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು. ದೇವಸಮುದ್ರದಲ್ಲಿ ರೈತ ಕಡೆಮನೆ ಪರಮೇಶ್ವರ ಅವರ ಗದ್ದೆಯಲ್ಲಿ ಕೃಷಿ ಇಲಾಖೆಯಿಂದ ಯಾಂತ್ರೀಕೃತ ಭತ್ತ ನಾಟಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಯಂತ್ರಗಳ ಸಹಾಯದಿಂದ ಭತ್ತ ನಾಟಿ ಮಾಡಿದರೆ ಬಿತ್ತನೆಬೀಜ, ಸಮಯ, ಕೃಷಿ ಕೂಲಿ, ನೀರು ಹಾಗೂ ನಿರ್ವಹಣೆ ವೆಚ್ಚ ಉಳಿತಾಯವಾಗಲಿದೆ. ಸಮಾನ ಅಂತರದಲ್ಲಿ ಸಸಿಗಳು ನಾಟಿಯಾಗಿ ಉತ್ತಮ ಇಳುವರಿ ದೊರೆಯಲಿದೆ. ತಾಲೂಕಿನಲ್ಲಿ 45 ಎಕರೆ ಗದ್ದೆಯಲ್ಲಿ ಯಂತ್ರಗಳಿಂದ ಭತ್ತ ನಾಟಿ ಮಾಡಿದ್ದು, ಇನ್ನೂ 200 ಎಕರೆ ನಾಟಿ ಮಾಡಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಸಿ.ಎ.ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಕೆ.ಸೋಮಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net