

ಶೃಂಗೇರಿ: ಶಿಕ್ಷಕ ಕೇವಲ ಶಿಕ್ಷಕನಾಗಿರದೆ ಹೊಸ ತಲೆಮಾರಿನ ಮಕ್ಕಳಿಗೆ ಹೊಸತನ ಕಲಿಸುವವನಾಗಿರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಗಂಗಾಧರಪ್ಪ ಹೇಳಿದರು.
ವಿದ್ಯಾನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಐದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿ ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡು, ವೃತ್ತಿಪರರಾಗಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಠ್ಯ ಕ್ರಮವನ್ನು ಬೋಧಿಸಬಹುದು ಎಂದರು. ತರಬೇತಿ ನೋಡಲ್ ಅಧಿಕಾರಿ ಸುಂದರೇಶ್ ಮಾತನಾಡಿ, ಶಾಲೆಯಲ್ಲಿ 1ರಿಂದ 3ನೇ ತರಗತಿವರೆಗೆ ನಲಿ-ಕಲಿ ಪದ್ದತಿ ಇದೆ. ಚಟುವಟಿಕೆ ಮೂಲಕ ಇತರ ವಿಷಯದೊಂದಿಗೆ ಇಂಗ್ಲಿಷ್ ಭಾಷೆಯನ್ನು ಸ್ಪಷ್ಟವಾಗಿ ಕಲಿಯಲು ರೂಢಿಸಿದ ತರಬೇತಿ ಇದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವಿನಯ್, ಶ್ರೀಕೃಷ್ಣ, ಗಜೇಂದ್ರ, ಬಿ.ಟಿ.ಮಂಜುನಾಥ್, ಮೈತ್ರಿ ,ನವೀನ್ ಹಾಗೂ ಸಿಆರ್‌ಪಿ ರಾಜಾನಾಯ್ಕ ಮತ್ತು ಶಶಿಕಲಾ ಇದ್ದರು.