

ವಿಜಯವಾಣಿ: ಕುಲ, ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಎಂಬ ಕನಕದಾಸರ ಕೀರ್ತನೆ ಇಡೀ ವಿಶ್ವಕ್ಕೆ ಆದರ್ಶ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಎಸ್.ಎಂ. ಶೇಖ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಬದುಕು ಸಾಗಿಸಿದರೆ ಮೋಕ್ಷ ಪಡೆಯಲು ಸಾಧ್ಯ. ಕನಕ ದಾಸರ ಸಂದೇಶಗಳು ಜನರ ಜೀವನದ ಮೇಲೆ ಅಪಾರ ಪ್ರಭಾವ ಬೀರಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುರಬರ ಸಂದ ಅಧ್ಯಕ್ಷ ರಾಜು ಕಂಬಾಗಿ ಮಾತನಾಡಿ, ಭಕ್ತಿ ಬೇಕು ಮುಕ್ತಿ ಪಡೆಯುವವರಿಗೆ. ಅವರ ನಾನು ನೀನು ಎನ್ನದಿರು ಮಾನವ ಎಂಬ ಸಂದೇಶ ಸರ್ವಕಾಲಿಕ. ಜಾತಿ ದೇವ ನಿರ್ಮಿತವಲ್ಲ. ಮಾನವ ನಿರ್ಮಿತ ಎಂದು ಕನಕದಾಸರ ಹೇಳಿದ ನುಡಿ ಮುತ್ತುಗಳು ಶ್ರೇಷ್ಠವಾಗಿವೆ ಎಂದರು.
ಮಡಿಕೇಶ್ವರದ ಸಾಹಿತಿ ಶಾಂತಲಾ ಪಾಟೀಲ ಕನಕದಾಸರ ಸಾಹಿತ್ಯದ ಕುರಿತು, ಶಿಕ್ಷಕ ಮಹೆತಾಬ ಕಾಗವಾಡ ಕನಕದಾಸರ ಕೀರ್ತನೆಗಳ ಕುರಿತು ಉಪನ್ಯಾಸ ನೀಡಿದರು. ಸುರೇಖಾ ರಾಠೋಡ, ಅರ್ಜುನ ಶಿರೂರ, ಎಂ.ಜಿ. ಮೋಟಗಿ, ರಾಮಗೊಂಡ ಪಡನಾಡ ವೇದಿಕೆಯಲಿದ್ದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಜತ್ತಿ ಸ್ವಾಗತಿಸಿದರು. ಸಾಹಿತಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ವಿಜಯಲಕ್ಷಿ$್ಮ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ, ರವಿ ಕಿತ್ತೂರ, ರೇಣುಕಾ ಬಿಸನಾಳ, ಶೋಭಾ ಹರಿಜನ, ಗಂಗಮ್ಮ ರೆಡ್ಡಿ, ಪರವೀನ ಶೇಖ, ಶಿವನಗೌಡ ಬಿರಾದಾರ, ಶಾಂತಕುಮಾರ ಗುರೂಜಿ ಮತ್ತಿತರರಿದ್ದರು.