ಬೋಧನೆಯಲ್ಲಿ ಕ್ರಿಯಾಶೀಲತೆ ಅಳವಡಿಸಿಕೊಳ್ಳಿ

24 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಣಿತ ವಿಷಯವನ್ನು ಕಲಿಯಲು ವಿಷಯದ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು. ಭಾರತದಲ್ಲಿ ವೈದಿಕ ಕಾಲದಿಂದಲೂ ಹಲವಾರು ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿತ್ತು. ಅದರಲ್ಲಿ ಮುಖಾಮುಖಿ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗಿತ್ತು ಎಂದು ನವದೆಹಲಿಯ ಎನ್​ಸಿಆರ್​ಟಿ ವಿಶ್ರಾಂತ ನಿರ್ದೇಶಕ ಜಿ. ರವೀಂದ್ರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗ, ಪಾವಟೆ ಇನ್​ಸ್ಟಿಟ್ಯೂಟ್​ ಆಫ್ ​ಮ್ಯಾಥಮೆಟಿಕ್ಸ್​ ಸೈನ್ಸ್​, ಕರ್ನಾಟಕ ವಿಶ್ವ ವಿದ್ಯಾಲಯ ಗಣಿತಶಾಸ್ತ್ರ ಪ್ರಾಧ್ಯಾಪಕರ ವೇದಿಕೆ ಆಶ್ರಯದಲ್ಲಿ "ಪ್ರಧಾನ ಮಂತ್ರಿ ಉಷಾ ಯೋಜನೆ' ಅಡಿ ಕವಿವಿ ಸೆನೆಟ್​ ಸಭಾಂಗಣದಲ್ಲಿ ಆಯೋಜಿಸಿದ್ದ ಗಣಿತಶಾಸ್ತ್ರ ಪ್ರಾಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭಾವನೆಗಳು ಕಲಿಕೆ ಮೇಲೆ ಪ್ರಭಾವ ಬೀರುತ್ತವೆ. ಶಿಕ್ಷಕರು ಬೋಧನೆಯಲ್ಲಿ ಕ್ರಿಯಾಶೀಲತೆ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಕಂಪ್ಯೂಟರ್​ ತಂತ್ರಜ್ಞಾನ ಮೂಲಕ ಗಣಿತವನ್ನು ವಿವಿಧ ಆಯಾಮಗಳಲ್ಲಿ ಬೋಧನೆ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಹೆಚ್ಚು ಅನುಕೂಲ ಎಂದರು.

ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ ಮಾತನಾಡಿ, ಕಲಿಕೆ ನಿರಂತರವಾದ ಪ್ರಕ್ರಿಯೆ. ಎಲ್ಲ ರೀತಿಯಿಂದಲೂ ಜ್ಞಾನ ಸಂಪಾದಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರಯತ್ನ ಪಡಬೇಕು. ಪಠ್ಯವನ್ನು ಅರ್ಥಮಾಡಿಕೊಂಡು ಅಧ್ಯಯನ ನಡೆಸಿ ಎಂದರು.

ಡಾ.ಸೂರಜ್​ ಜೈನ್​ ಮಾತನಾಡಿದರು. ಕವಿವಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್​.ಸಿ. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಚ್​.ಎಸ್​.ರಾಮನೆ, ಪ್ರೊ. ಪಿ.ಜಿ.ಪಾಟೀಲ, ಡಾ. ಎಂ. ಕೆ. ಭಟ್​, ಕೃಷ್ಣಾ ಚೌಡರೆಡ್ಡಿ, ಡಾ.ಬಿ.ಪರ್ವತಲು, ಡಾ.ಶಶಿಕಾಂತ ಆಲೂರ, ಸಂಶೋಧಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net