ಡಿಜಿಟಲೀಕರಣ ವ್ಯವಸ್ಥೆ ಅಳವಡಿಸಿಕೊಳ್ಳಿ

Untitled design (1)
ಕಂಪ್ಲಿಯಲ್ಲಿ ಏರ್ಪಡಿಸಿದ್ದ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪಿ.ಎಸ್.ಅಟ್ಟಪ್ಪ ಮಾತನಾಡಿದರು. ಟಿವಿಸಿ ಅಧ್ಯಕ್ಷ ರಾಮಾಂಜನೇಯಲು, ಸದಸ್ಯ ಅಕ್ಬರ್‌ಅಲಿ, ಕೌಶಲ ಅಭಿವೃದ್ಧಿ ಅಧಿಕಾರಿಗಳಾದ ಸೌಮ್ಯಾ, ವಿಶ್ವನಾಥ, ದುರ್ಗಾರಾಣಿ ಇದ್ದಾರೆ.
Published on

ಕಂಪ್ಲಿ: ಬೀದಿಬದಿ ವ್ಯಾಪಾರಿಗಳು ಡಿಜಿಟಲೀಕರಣ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪಿ.ಎಸ್.ಅಟ್ಟಪ್ಪ ಹೇಳಿದರು.


ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೀದಿಬದಿ ವ್ಯಾಪಾರಿಗಳು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬಳಸಿಕೊಳ್ಳಬೇಕು.

ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಹೆಚ್ಚಿನ ಮೊತ್ತದ ಸಾಲ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ವಿಮೆ ಸೇರಿ ಸರ್ಕಾರದ ನಾನಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಸಮುದಾಯ ಸಂಘಟನಾಧಿಕಾರಿಗಳಾದ ಎಂ.ವಸಂತಮ್ಮ, ಅಂಬರೀಷ್, ಟಿವಿಸಿ ಅಧ್ಯಕ್ಷ ರಾಮಾಂಜನೇಯ, ಸದಸ್ಯರಾದ ರಂಗಪ್ಪ, ಅಕ್ಬರ್‌ಅಲಿ, ಕೌಶಲಾಭಿವೃದ್ಧಿ ಜಿಲ್ಲಾ ವ್ಯವಸ್ಥಾಪಕಿ ಸೌಮ್ಯಾ, ಎಡಿ ವಿಶ್ವನಾಥ, ಡಿಇಒ ದುರ್ಗಾರಾಣಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕ್ಷೇತ್ರಾಧಿಕಾರಿ ಗುರುಕೃಷ್ಣ, ಎಸ್‌ಬಿಐ ಕ್ಷೇತ್ರಾಧಿಕಾರಿ ಮಧುಕರ್, ಸಿಆರ್‌ಪಿಸಿಗಳಾದ ರೇಣುಕಮ್ಮ, ರೋಜಾಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net