ಅಂಬೇಡ್ಕರ್​ ತತ್ವ, ವಿಚಾರಧಾರೆ ಅಳವಡಿಸಿಕೊಳ್ಳಿ

Adopt Ambedkar philosophy and ideology
ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದ ಅಂಬೇಡ್ಕರ್​ ವೃತ್ತದಲ್ಲಿ ಅಂಬೇಡ್ಕರ್​ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ದೇವೇಂದ್ರಪ್ಪ ಬೆಳ್ಳಿಕಟ್ಟಿ, ಗಿರೀಶಗೌಡ ಪಾಟೀಲ, ಶಿವಾನಂದ ವಾಲಿ, ಬಸವಂತ್ರಾಯ ನಾಗರಿತ್ತಿ, ಯಮನಪ್ಪ ಛಲವಾದಿ, ಯಲ್ಲಪ್ಪ ಛಲವಾದಿ, ಬೈಲಪ್ಪ ಛಲವಾದಿ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ಡಾ.ಬಿ.ಆರ್​.ಅಂಬೇಡ್ಕರ್​ ಅವರು ಸರ್ವ ಜನಾಂಗಕ್ಕೆ ಸಲ್ಲುವ ನಾಯಕ ಎಂದು ಯುವಜನ ಸೇನೆ ರಾಜ್ಯಾಧ್ಯ ಶಿವಾನಂದ ವಾಲಿ ಹೇಳಿದರು.

ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿರುವ ಅಂಬೇಡ್ಕರ್​ ವೃತ್ತದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆ ಸ್ಥಾಪಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಸಂದರ್ಭಾನುಸಾರ ಪೂಜೆಗೆ ಸೀಮಿತಗೊಳಿಸದೆ ಅಂಬೇಡ್ಕರ್​ ಅವರ ತತ್ವ, ವಿಚಾರಧಾರೆಗಳನ್ನು ಆಚರಣೆಯಲ್ಲಿ ತರಬೇಕು ಎಂದರು.

ಅಂಬೇಡ್ಕರ್​ ಸೇನೆ ತಾಲೂಕು ಅಧ್ಯ ಪ್ರಕಾಶ ಛಲವಾದಿ ಸರೂರು, ಬಸವರಾಜ ಸರೂರು, ರೇವಣಸಿದ್ದಪ್ಪ ಮುರಾಳ, ಅಲ್ಲಿಸಾಬ ಸುರಪುರ ಮಾತನಾಡಿದರು.

ಗ್ರಾಪಂ ಅಧ್ಯ ದೇವೇಂದ್ರಪ್ಪ ಬೆಳ್ಳಿಕಟ್ಟಿ, ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯ ಗಿರೀಶಗೌಡ ಪಾಟೀಲ, ಬಸವಂತ್ರಾಯ ನಾಗರಿತ್ತಿ, ಯಮನಪ್ಪ ಛಲವಾದಿ, ಯಲ್ಲಪ್ಪ ಛಲವಾದಿ, ಬೈಲಪ್ಪ ಛಲವಾದಿ, ನಿಂಗಣ್ಣ ಜಲವಾದಗಿ, ಅಪ್ಪಣ್ಣ ಧನ್ನೂರ, ಮಲ್ಲಣ್ಣ ಬಿಜ್ಜೂರ, ರೇವಣಸಿದ್ದಪ್ಪ ಛಲವಾದಿ, ಅಪ್ಪ್ಪು ಛಲವಾದಿ, ಶರಣು ಛಲವಾದಿ, ರಮೇಶ ಛಲವಾದಿ, ದ್ಯಾವಪ್ಪ ಛಲವಾದಿ, ಪಾವಡೆಪ್ಪ ಛಲವಾದಿ, ಸಂಜೀವಪ್ಪ ಛಲವಾದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net