ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ

19 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜು ಮತ್ತು ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗ ಮತ್ತು ಎನ್‌ಎಸ್‌ಎಸ್ ಘಟಕದ ಸಹಯೋಗದೊಂದಿಗೆ ಜಾಗತಿಕ ಅಽಕ ರಕ್ತದೊತ್ತಡದ ದಿನವನ್ನು ಹುಬ್ಬಳ್ಳಿ ವಿದ್ಯಾನಗರದ ಎಸ್‌ಡಿಎಂ ಪಾಲಿ ಕ್ಲಿನಿಕ್‌ನಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಎಸ್‌ಡಿಎಂ ಮೆಡಿಕಲ್ ಕಾಲೇಜಿನ ವೈದ್ಯಕೀಯ ಚಿಕಿತ್ಸಾ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಬಸವರಾಜ ಹಳಕಟ್ಟಿ ಮಾತನಾಡಿ, ೪೦ ವರ್ಷ ಮೇಲ್ಪಟ್ಟ ಜನರು ಆಗಾಗ ಅಽಕ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತದೊತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಽಕ ರಕ್ತದೊತ್ತಡ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಬೇಕು. ಉತ್ತಮ ಜೀವನ ಶೈಲಿಯಿಂದ ರೋಗಗಳನ್ನು ತಡೆಯಬಹುದು. ಕೆಲವೊಮ್ಮೆ ಅಽಕ ರಕ್ತದೊತ್ತಡವು ಅನುವಂಶೀಯವಾಗಿದ್ದು, ಯಾವುದೇ ರೋಗ ಲಕ್ಷಣ ಕಾಣದಿರಬಹುದು ಎಂದರು.
ಕಾರ್ಯಕ್ರಮದ ನಿಮಿತ್ತ ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜಿನಿಂದ ಉಚಿತ ರಕ್ತದೊತ್ತಡ ತಪಾಸಣೆ ಮತ್ತು ತಡೆಗಟ್ಟಲು ಮಾಡಬೇಕಾದ ವ್ಯಾಯಾಮದ ಮಹತ್ವ ತಿಳಿಸಲಾಯಿತು.
ಕಾರ್ಡಿಯೋರೆಸ್ಪಿರೆಟರಿ ವಿಭಾಗದ ಮುಖ್ಯಸ್ಥೆ ಡಾ. ಸಂಗಿತಾ ಅಪ್ಪಣ್ಣವರ ಮತ್ತು ಡಾ. ಶರಣ ಅವರು ಅಽಕ ರಕ್ತದೊತ್ತಡದ ಜಾಗೃತಿ ಕುರಿತು ವಿವರಿಸಿದರು. ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ ಪರಮಾರ ಅವರು ಉಪಸ್ಥಿತರಿದ್ದರು.
ಡಾ. ತುಳಸಿ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net