ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಪ್ರವೇಶಾತಿ ಆರಂಭ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭಿಸಲಾಗಿದೆ ಎಂದು ಧಾರವಾಡ ಕೇಂದ್ರದ ಸಂಯೋಜಕ ನಾಗರಾಜ ಎಚ್​.ಎನ್​. ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಹಂತದಲ್ಲಿ ಬಿಎ, ಬಿಕಾಂ, ಬಿಎಸ್​ಸಿ, ಬಿಎಸ್​ಸಿ ಐಟಿ, ಬಿಎಸ್​ಸಿ ಹೋಂ ಸೈನ್ಸ್​, ಬಿಬಿಎ, ಬಿಸಿಎ, ಡಿಪ್ಲೋಮಾ ಸೇರಿ 60ಕ್ಕೂ ಕೋರ್ಸ್​ಗಳಿಗೆ ಪ್ರವೇಶಾತಿ ಆರಂಭಿಸಲಾಗಿದೆ. ಆಟೋ, ಕ್ಯಾಬ್​ ಚಾಲಕರ ಮಕ್ಕಳು, ಬಿಪಿಎಲ್​ ಮಹಿಳೆಯರಿಗೆ, ಮಾಜಿ ಸೈನಿಕರಿಗೆ, ತೃತೀಯ ಲಿಂಗಿ ಮತ್ತು ದೃಷ್ಠಿದೋಷ ಮತ್ತು ಕೋವಿಡ್​ನಲ್ಲಿ ಮೃತ ಪಾಲಕರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದರು.

ಆಸಕ್ತರು ಎಸ್ಸೆಸ್ಸೆಲ್ಸಿ, ಪಿಯು

ಸಿ, ಪದವಿ ಅಂಕಪಟ್ಟಿ, ಆಧಾರ್​, ಭಾವಚಿತ್ರ ಸಹಿತ ಝರಾಕ್ಸ್​, ಮೂಲ ಅಂಕಪಟ್ಟಿಯೊಂದಿಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಉದ್ಯೋಗ ಭವನ, ಕೆಎಚ್​ಎಸ್​ಎಂ ಕಟ್ಟಡ, ಜುಬುಲಿ ವೃತ್ತ ಬಳಿಯ ಕಚೇರಿಗೆ ಭೇಟಿ ನೀಡಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net