ಮೆರಿಟ್ ಆಧಾರದಲ್ಲಿ ವಿವಿಧ ವೃತ್ತಿ ಕೋರ್ಸ್ ಗಳಿಗೆ ಪ್ರವೇಶ

application
Published on

ಮೈಸೂರು: ಎನ್ ಆರ್ ಮೊಹಲ್ಲಾದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿ ಖಾಲಿ ಇರುವ ವಿವಿಧ ವೃತ್ತಿಗಳ 203 ಸ್ಥಾನಗಳಿಗೆ 8 ನೇ ತರಗತಿ ಪಾಸಾದ (ವೆಲ್ಡರ್ ವೃತ್ತಿಗೆ ಮಾತ್ರ) ಹಾಗೂ ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಪ್ರಾಚಾರ್ಯರ ಹಂತದಲ್ಲಿಯೇ ಪ್ರವೇಶ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಐಟಿಐಗೆ ತಮ್ಮ ಮೂಲದಾಖಲಾತಿಗಳೊಡನೆ ನೇರವಾಗಿ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಎನ್ ಆರ್ ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದೂ.ಸಂ:0821-2498456 ನ್ನು ಸಂಪರ್ಕಿಸಬಹುದು ಎಂದು ಎನ್ ಆರ್ ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net