ಆಡಳಿತಾಧಿಕಾರಿ ನೇಮಕಕ್ಕೆ ಸದಸ್ಯರ ಆಗ್ರಹ

Published on

ಸಿಂದಗಿ: ಪಟ್ಟಣದ ಪುರಸಭೆ ಹಾಲಿ ಅಧ್ಯಕ್ಷ ಶಾಂತವೀರ ಬಿರಾದಾರ ಅವರ ಏಕ ಪಕ್ಷೀಯ ನಿರ್ಧಾರ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಅವರನ್ನು ತನಿಖೆಗೊಳಡಿಸಿ, ಪುರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಹದಿನಾರು ಸದಸ್ಯರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಿದ ಸದಸ್ಯರು, ಅಧ್ಯಕ್ಷ ಬಿರಾದಾರ ಅವರು ಸದಸ್ಯರ ಗಮನಕ್ಕೆ ತರದೆ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಯೌವುದೇ ಸದಸ್ಯರಿಗೆ ಕಿಮ್ಮತ್ತು ನೀಡದೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ನಾವೆಲ್ಲರೂ ಕೊಟ್ಟ ಅಧಿಕಾರ ದುರುಪಯೋಗ ಪಡಿಸಿಕೊಂಡು ಆಸ್ತಿ ತೆರಿಗೆ ತುಂಬದೆ ನಕಲಿ ಚಲನ್ ಸೃಷ್ಟಿಸಿ ಪುರಸಭೆಗೆ ಸರ್ಕಾರಕ್ಕೆ ತಮ್ಮ ಬಡಾವಣೆಯ ನಿವೇಶನಗಳ ಉತಾರಿಗಳನ್ನು ಭೋಗಸ್ ಪಡೆದು, ಕಟ್ಟಡ ಪರವಾನಿಗೆ ಇಲ್ಲದೇ, ಕಟ್ಟಡ ನಿರ್ಮಿಸಿಕೊಂಡು, ಅಕ್ರಮವೆಸಗಿ, ಪುರಸಭೆಯ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದು, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥರನ್ನು ನಡೆನಿಖೆಗೊಳಪಡಿಸಿಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ವ್ಯಾಪಾರಸ್ಥರ ಅತಿಕ್ರಮಣ ತೆರವುಗೊಳಿಸುವ ಕುರಿತು ಸಭೆ ನಡೆಸದೆ, ಸದಸ್ಯರ ಗಮನಕ್ಕೂ ತಾರದೇ ತಾವೇ ಮುಂದೆ ನಿಂತು ಬಡವರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಕೂಡಲೇ ಬಿರಾದಾರ ಅವರ ಕಾರ್ಯವೈಖರಿ ಮೇಲೆ ಸೂಕ್ತ ತನಿಖೆ ನಡೆಸಿ, ಆಡಳಿತಾಧಿಕಾರಿ ನೇಮಕ ಮಾಡುವಂತೆ ಸದಸ್ಯರಾದ ಪ್ರತಿಭಾ ಕಲ್ಲೂರ, ಉಮಾದೇವಿ ಶುಲ್ಪಿ, ಶ್ರೀಶೈಲ ಬೀರಗೊಂಡ, ಕಲಾವತಿ ಕಡಕೋಳ, ಬಸವರಾಜ ಯರನಾಳ, ಹಣಮಂತ ಸುಣಗಾರ, ಬಾದಶ್ಯಾಸಾಬ ತಾಂಬೋಳಿ, ಖೈರುನಬಿ ನಾಟಿಕಾರ, ಶಾಂತವೀರ ಮನಗೂಳಿ, ಭಾಗವ್ವ ಡೋಣೂರ, ಸಂದಿಪ ಚೌರ, ತಹಶೀನ ಮುಲ್ಲಾ, ಬಸಮ್ಮ ಸಜ್ಜನ, ಗೊಲ್ಲಾಳ ಬಂಕಲಗಿ, ಶರಣಗೌಡ ಪಾಟೀಲ, ಮಹಾದೇವಿ ನಾಯ್ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net