ಶಿಸ್ತು, ಶಿಕ್ಷಣದಿಂದ ಸಮಾಜ ಬಲಿಷ್ಠ : ಸಿ.ಎ.ಉದಯಾನಂದ ಚಿಂತನೆ

47
Published on

ಉಳ್ಳಾಲ: ಶಿಕ್ಷಕರು ಶಿಸ್ತಿನಿಂದ ಕಾರ್ಯಪ್ರವೃತ್ತರಾದರೆ ಬಲಿಷ್ಠ ಸಮಾಜ ಕಟ್ಟಬಹುದು. ಶಿಕ್ಷಣ, ಶಿಕ್ಷಕ, ಶಿಸ್ತು ಇವು ಮೂರು ಪರಸ್ಪರ ಹೊಂದಿಕೊಂಡು ಕಾರ್ಯತತ್ಪರವಾದಾಗ ಸಮುದಾಯ ಬಲಿಷ್ಠಗೊಳ್ಳುತ್ತದೆ ಎಂದು ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪ್ರಾಧ್ಯಾಪಕ ಸಿ.ಎ.ಉದಯಾನಂದ ತಿಳಿಸಿದರು.

ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಗೆ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಆಡಳಿತಾತ್ಮಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಶಿಕ್ಷಕರ ಸಹಕಾರಿ ಸಂಘದ ಬಗ್ಗೆ ಎಲ್ಲರಿಗೂ ಅಭಿಮಾನ ಗೌರವವಿದೆ. ಗತವೈಭವ ಮರಳಿ ತರಲು ನಿರ್ದೇಶಕರು, ಸಿಬ್ಬಂದಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕ ಎಂ.ಜೆ.ಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಂಘದ ಅಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್, ಅಲೋ ಸಿಯಸ್ ಡಿಸೋಜ, ಪ್ರಮೀಳಾ, ಜಾಯ್ಸ ಡಿಸೋಜ, ಜಗದೀಶ್ ಶೆಟ್ಟಿ, ಲ್ಯಾನ್ಸಿ ಸಿ.ತಾವ್ರೋ, ತ್ಯಾಗಮ್ ಹರೇಕಳ, ರಾಧಾಕೃಷ್ಣ ರಾವ್, ನಿರ್ದೇಶಕರಾದ ಉಸ್ಮಾನ್, ಹಿಲ್ಡಾ ಕ್ಲೆಮನ್ಸಿಯಾ ಪಿಂಟೋ, ರೀಟಾ ಕಾಟಿಪಳ್ಳ, ವಾಣಿ, ವನಿತಾ ಸುರೇಶ್, ತಿಪ್ಪೋಜಿ, ವಾಸುದೇವ ರಾವ್, ಅಂಬರೀಶ್, ಚಂದ್ರಶೇಖರ್, ರೂಪಾಕ್ಷ, ವಾಸುದೇವ ರಾವ್, ರಘುನಾಥ್ ರಾವ್, ಕಾರ್ಯನಿರ್ವಹಣಾಧಿಕಾರಿ ಶರ್ಮಿಳಾ, ವಿನಯಾ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಉದಯಶಂಕರ್ ವಂದಿಸಿದರು. ನಿರ್ದೇಶಕ ಮಾರ್ಕ್ಸ್ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net