ಆಡಳಿತ ಕಚೇರಿ ಶೀಘ್ರ ಆರಂಭಿಸಿ

24mnv02
Published on

ಮಾನ್ವಿ: ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ್ ವಿನಾಯಕರಾವ್‌ಗೆ ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.

ನೇಕಾರರ ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ರಾಜಕೀಯ ಅಭಿವೃದ್ಧಿಗಾಗಿ 2023 ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದರೆ ಅನುಕೂಲವಾಗಲಿದೆ. ನಿಗಮಕ್ಕೆ ಕೂಡಲೇ ಆಡಳಿತ ಕಚೇರಿ ಆರಂಭಿಸಬೇಕು, ನಿಗಮಕ್ಕೆ ಅಧ್ಯಕ್ಷರನ್ನ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net