ಸಾಂಕ್ರಾಮಿಕ ರೋಗ ತಡೆಗಟ್ಟಿ

dj dvg avrgolla
Published on

ದಾವಣಗೆರೆ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ ಎಂದು ಆವರಗೊಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಡಿ. ವೆಂಕಟೇಶ್ ತಿಳಿಸಿದರು.

ಆವರಗೊಳ್ಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಕುನ್ ಗುನ್ಯಾ, ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ಕ್ಷಯ ರೋಗದ ಲಕ್ಷಣಗಳ ಕುರಿತು ಮಾತನಾಡಿದರು.

ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕುನ್ ಗುನ್ಯಾ, ಮಿದುಳು ಜ್ವರ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಬರುತ್ತವೆ.

ತೀವ್ರ ಜ್ವರ, ತಲೆ ನೋವು, ಕಣ್ಣಿನ ಹಿಂಭಾಗ ನೋವು, ಮೈ ಕೈ ನೋವು, ಕೀಲು-ಮೂಳೆ ನೋವು, ಕಾಲು ಬಾವು, ಚಳಿ, ಬೆವರುವಿಕೆ, ನಡುಕದ ಲಕ್ಷಣಗಳು ಪ್ರತಿ ದಿನ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳಬಹುದು ಎಂದರು.

ಕೆಲವು ಪ್ರಕರಣಗಳಲ್ಲಿ ತಲೆನೋವು ಮತ್ತು ಸುಸ್ತು ಮಾತ್ರ ಕಾಣಿಸಿಕೊಳ್ಳಬಹುದು.

ಕ್ಷಯ ರೋಗದಲ್ಲಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವಿಕೆ, ಹಸಿವು ಆಗದಿರುವುದು, ತೂಕ ಕಡಿಮೆ ಆಗಿರುವುದು, ಕಫಾದಲ್ಲಿ ರಕ್ತ ಕಾಣಿಸಿಕೊಳ್ಳುವುದು ಲಕ್ಷಣಗಳಾಗಿವೆ ಎಂದು ಹೇಳಿದರು.

ನೀರಿನ ಮೂಲಗಳಾದ ಡ್ರಮ್, ಬ್ಯಾರೆಲ್, ತೊಟ್ಟಿ, ನೀರಿನ ಗುಂಡಿ, ತೆಂಗಿನಕಾಯಿ ಚಿಪ್ಪು, ಟೀ ಲೋಟ, ಹೂವಿನ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು.

ಮನೆಯ ಸುತ್ತಮುತ್ತ ಘನ ತ್ಯಾಜ್ಯ ಸ್ವಚ್ಛಗೊಳಿಸುವುದು, ಸೊಳ್ಳೆಯ ಪರದೆ ಉಪಯೋಗಿಸುವುದು, ಸೊಳ್ಳೆ ನಾಶಕ ದ್ರಾವಣ ಬಳಸುವುದು,

ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಯ ಉತ್ಪನ್ನ ತಾಣಗಳಲ್ಲಿ ಟೆಮೀಫಾಸ್ ದ್ರಾವಣ ಬಳಸುವುದು, ಲಾರ್ವಾಹಾರಿ ಮೀನುಗಳನ್ನು ದೊಡ್ಡ ತೊಟ್ಟಿಗಳಲ್ಲಿ ಬಿಡುವುದು ನಿಯಂತ್ರಣ ಕ್ರಮಗಳಾಗಿವೆ ಎಂದು ವಿವರಿಸಿದರು.

ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಜಾಥಾ ಮಾಡುವ ಮೂಲಕ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಘೋಷ ವಾಕ್ಯಗಳನ್ನು ಕೂಗುತ್ತಾ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಚಂದ್ರಪ್ಪ, ಸದಸ್ಯ ಜಿ.ಟಿ. ವೀರಣ್ಣ, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪ್ರೌಢ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net