ಹೇಮಾ ಹರ್ಲಾಪುರಗೆ ಲಾಟರಿ ಅದೃಷ್ಟ

1 SRT-2
ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಹೇಮಾ ಹರ್ಲಾಪುರ, ಉಪಾಧ್ಯಕ್ಷರಾಗಿ ಗಿರಿಜವ್ವ ಲಮಾಣಿ ಆಯ್ಕೆಯಾದರು.
Published on

ಶಿರಹಟ್ಟಿ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಕಡಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೇಮಾ ಶರಣಪ್ಪ ಹರ್ಲಾಪುರ ಹಾಗೂ ಉಪಾಧ್ಯಕ್ಷರಾಗಿ ಗಿರಿಜವ್ವ ಮುತ್ತಪ್ಪ ಲಮಾಣಿ ಆಯ್ಕೆಯಾದರು.

ಒಟ್ಟು 14 ಸದಸ್ಯರನ್ನು ಹೊಂದಿರುವ ಗ್ರಾಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹೇಮಾ ಹರ್ಲಾಪುರ ಮತ್ತು ಶಿವಪ್ಪ ಕದಂ ನಾಮಪತ್ರ ಸಲ್ಲಿಸಿದ್ದರು. ಇಬ್ಬರಿಗೂ ತಲಾ 7 ಮತಗಳು ಲಭಿಸಿದ್ದರಿಂದ ಚುನಾವಣಾಧಿಕಾರಿ ಸುರೇಶ ಕುಂಬಾರ ಚೀಟಿ ಎತ್ತುವುದರ ಮೂಲಕ ಅಧ್ಯಕ್ಷರ ಆಯ್ಕೆ ಮಾಡಿದಾಗ ಹೇಮಾ ಶರಣಪ್ಪ ಹರ್ಲಾಪುರ ಅವರಿಗೆ ಅದೃಷ್ಟ ಒಲಿಯಿತು.

ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜವ್ವ ಲಮಾಣಿ ಹಾಗೂ ಬಸಮ್ಮ ಮಾದರ ನಡುವೆ ಪೈಪೋಟಿ ನಡೆದು, ಗಿರಿಜವ್ವ ಮುತ್ತಪ್ಪ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರೆಲ್ಲ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಬಿ.ಡಿ. ಪಲ್ಲೇದ, ಯಲ್ಲಪ್ಪ ಹರ್ಲಾಪುರ. ಶರಣಪ್ಪ ಹೊಂಬಳ, ಶೇಖರ ಹೈದ್ರಿ, ಮಹಾದೇವಪ್ಪ ಅಡವಿ, ಬಸವರಾಜ ಪೂಜಾರ, ಅಪ್ಪು ಪೂಜಾರ, ಸಿದ್ದಪ್ಪ ಮ್ಯಾಗೇರಿ, ಸಿದ್ದಲಿಂಗೇಶ ಅಂಗಡಿ, ರಾಘವೇಂದ್ರ ಬಳ್ಳಾರಿ, ಹಾಲಪ್ಪ ದುಗ್ಗಾಣಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net