ಕರಾವಳಿ ಮೀನುಗಾರಿಕೆಗೆ ಮಾಸ್ಟರ್​ ಪ್ಲಾನ್​

udp-2-yashpal
Published on

ಉಡುಪಿ: ರಾಜ್ಯದ ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಫೀಶರೀಶ್​ ೆಡರೇಶನ್​ ವತಿಯಿಂದ ಮಾಸ್ಟರ್​ ಪ್ಲಾನ್​ ತಯಾರಿಸಲಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್​ ಆಶ್ರಯದಲ್ಲಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆಡಳಿತ ನಿರ್ವಹಣಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

31 ಜಿಲ್ಲೆಗಳಲ್ಲಿರುವ ಸಂಗಳಿಗೆ ಉಡುಪಿ ಸಹಕಾರ ಯೂನಿಯನ್​ ಮಾದರಿಯಾಗಿದೆ. ರಾಜ್ಯದ ಸಹಕಾರಿಗಳ ಪರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ಸ$ಸಂಪದ ಯೋಜನೆಯನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್​ ತಿಂಗಳಲ್ಲಿ ಉಚ್ಚಿಲದಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್​ ರಂಜನ್​ ಸಿಂಗ್​ ಅಧ್ಯಕ್ಷತೆಯಲ್ಲಿ ಬೃಹತ್​ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ಸಂಗಳ ಉಪನಿಬಂಧಕಿ ಕೆ.ಆರ್​. ಲಾವಣ್ಯ ಮಾತನಾಡಿ, ಸ್ಥಳಿಯ ಆರ್ಥಿಕತೆಗೆ ಮೀನುಗಾರಿಕಾ ಕ್ಷೇತ್ರ ಬಹಳಷ್ಟು ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಮೀನುಗಾರಿಕಾ ಸಹಕಾರ ಸಂಗಳು ಸ್ವಾವಲಂಬಿಗಳಾಗಿ ಅಭಿವೃದ್ಧಿ ಹೊಂದಲು ಸಿಇಒಗಳು ಕಾನೂನು ಅರಿವು ಹೊಂದಿರುವುದು ಬಹಳ ಮುಖ್ಯ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ 740ಕ್ಕೂ ಅಧಿಕ ಸಹಕಾರಿ ಸಂಗಳು ಕಾರ್ಯನಿರ್ವಹಿಸುತ್ತಿದ್ದು, ಯೂನಿಯನ್​ ಮೂಲಕ ವರ್ಷಕ್ಕೆ 12 ರಿಂದ 14 ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಆಡಳಿತಾತ್ಮಕ ವಿಷಯಗಳಲ್ಲಿ ಸಂಬಂಧಪಟ್ಟವರಿಗೆ ಸಹಕಾರಿ ಕಾನೂನುಗಳ ಅರಿವು ಮೂಡಿಸಲಾಗುತ್ತಿದೆ ಎಂದರು.

ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಟಿ. ಅಂಜನಾದೇವಿ, ಸಹಕಾರ ಸಂಗಳ ಸಹಾಯಕ ನಿಬಂಧಕಿ ಸುಕನ್ಯಾ, ಮಲ್ಪೆ ಯಾಂತ್ರಿಕ ದೋನಿ ಮೀನುಗಾರರ ಪ್ರಾ.ಸ.ಸಂದ ಅಧ್ಯಕ್ಷ ರಾಮಚಂದ್ರ ಕುಂದರ್​, ಯೂನಿಯನ್​ ಸದಸ್ಯರಾದ ಕಟಪಾಡಿ ಶಂಕರಪೂಜಾರಿ, ಎಚ್​. ಗಂಗಾಧರ ಶೆಟ್ಟಿ, ಕೆ. ಕೊರಗ ಪೂಜಾರಿ, ಇಂಡಿಯಾ ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಹಿರಿಯ ವ್ಯವಸ್ಥಾಪಕಿ ಸೀತಾ ಜೆ.ಎಸ್​. ಉಪಸ್ಥಿತರಿದ್ದರು. ಯೂನಿಯನ್​ ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿ ಅನುಷಾ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net