

ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಡಿಸಿ ದಿವಾಕರ್ ಅಭಿಮತ
ಹೊಸಪೇಟೆ: ಪೊಲೀಸ್ ಇಲಾಖೆ ಇಲ್ಲದೇ ಆಡಳಿತ ವ್ಯವಸ್ಥೆಯನ್ನು ಊಹಿಸಲೂ ಸಾಧ್ಯವಿಲ್ಲ. ಪೊಲೀಸರ ರಕ್ಷಣೆಯಿಂದ ನಾಡು ಸುಭಿಕ್ಷೆಯಾಗಿರಲು ಸಾಧ್ಯವೆಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ಇಲಾಖೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ, ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಭಾರತೀಯ ಸಂವಿಧಾನದತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಆದೇಶಗಳನ್ನು ಜಾರಿಗೊಳಿಸುವ ಕೊನೆಯ ಹಂತದಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕೆಲವೊಮ್ಮೆ ಕಠಿಣ ಪರಿಸ್ಥಿತಿ ಎದುರಾದಾಗ ಸ್ವತಃ ಜಿಲ್ಲಾಧಿಕಾರಿಯಾಗಿದ್ದರೂ, ಖಾಕಿ ಸಮವಸ್ತç ಧರಿಸಿದ ಓರ್ವ ಪೇದೆ ಜೊತೆಗಿದ್ದರೆ ಆನೆ ಬಲ ಬಂದAತಾಗುತ್ತದೆ ಎಂದು ಪೊಲೀಸರ ಶೌರ್ಯ, ಸಾಹಸಗಳನ್ನು ಕೊಂಡಾಡಿದರು.
ಸಾರ್ವಜನಿಕರು ಕುಟುಂಬದ ಜತೆಗೆ ಸಂತಸ, ಸಂಭ್ರಮದಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರೆ, ಪೊಲೀಸರು ಮಾತ್ರ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹಗಲಿರುಳು ಶ್ರಮಿಸುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು.
ಸಮಾಜದ ಹಿತಕ್ಕಾಗಿ ದುಡಿಯುವ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳು ನಾನಾ ರೀತಿಯ ಒತ್ತಡಗಳಿಗೆ ಸಿಲುಕಿ, ಆರೋಗ್ಯ, ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಒತ್ತಡಗಳನ್ನು ಕಡಿಮೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಕುಟುಂಬಕ್ಕೆ ಕೇವಲ ಎಟಿಎಂ ಆಗಬಾರದು. ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ತೋರಬೇಕು. ಅವರ ವಿದ್ಯಾಭ್ಯಾಸ, ಬೆಳವಣಿಗೆ ಬಗ್ಗೆಯೂ ಗಮನ ಹರಿಸಬೇಕು. ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು ಸಲಹೆ ನೀಡಿದರು.
ಜಿ.ಪಂ.ಸಿಇಒ ಬಿ.ಸದಾಶಿವ ಪ್ರಭು ಮಾತನಾಡಿ, ಸೈನ್ಯ ಮತ್ತು ಪೊಲೀಸ್ ವ್ಯವಸ್ಥೆ ದೇಶದ ಎರಡು ಕಣ್ಣುಗಳಿದ್ದಂತೆ. ಅವರಿಗೆ ಸಿಗುವ ಗೌರವ ಮತ್ತು ಸೌಲಭ್ಯಗಳು ಇನ್ನಷ್ಟು ದ್ವಿಗುಣಗೊಳ್ಳಬೇಕು. ವ್ಯವಸ್ಥೆಯಲ್ಲಿ ಸುಧಾರಣೆ ಎಂಬುದು ಅನೇಕ ವರ್ಷಗಳ ಕೂಗು. ಮುಂದಿನ ದಿನಗಳಲ್ಲಿ ಅದು ಸುಧಾರಣೆಯಾಗುವ ನಂಬಿಕೆ ಇದೆ ಎಂದು ಹೇಳಿದರು.
ನಾನು ೨೦ ವರ್ಷಗಳ ಸೇನೆಯಲ್ಲಿ ಹಾಗೂ ೧೮ ತಿಂಗಳು ಪೊಲೀಸ್ ಇಲಾಖೆಯಲ್ಲೂ ಕಾರ್ಯನಿರ್ವಹಿಸಿದ್ದೇನೆ. ಯೋಧರು ಮತ್ತು ಪೊಲೀಸರ ಸೇವೆ, ತ್ಯಾಗ, ಬಲಿದಾನವನ್ನು ಸಾರ್ವಜನಿಕರು ಗುರುತಿಸುವ ಜತೆಗೆ ಗೌರವಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಇದಕ್ಕೂ ಮುನ್ನ ಎಸ್ಪಿ ಶ್ರೀಹರಿ ಬಾಬು, ವಿಜಯನಗರ ಜಿಲ್ಲೆ ಸೇರಿದಂತೆ ದೇಶಾದ್ಯಂತ ಈ ರ್ವ ಹುತಾತ್ಮರಾದ ೧೮೯ ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರುಗಳನ್ನು ಓದಿ, ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ತಳವಾರ್, ವೆಂಕಟಪ್ಪ ನಾಯಕ, ಮಲ್ಲೇಶಪ್ಪ ಮಲ್ಲಾಪುರ, ಮಹಾಂತೇಶ ಕೋನಬೇವು, ಪಿಐಗಳಾದ ನಾಗರಾಜ್ ಕಮ್ಮಾರ್, ಸುಧೀರ್ ಬೆಂಕಿ, ವಿಕಾಸ್ ಲಮಾಣಿ, ಸುರೇಶ್ ತಳವಾರ, ವೆಂಕಟಸ್ವಾಮಿ, ಶ್ರೀನಿವಾಸ್ ಮೇಟಿ, ಬಾಲನಗೌಡ, ದೀಪಕ್ ಬೂಸರೆಡ್ಡಿ, ಉಮೇಶ್ ಕಾಂಬ್ಳೆ, ಶಿವರಾಜ್, ಶಶಿಕಿರಣ್ ಸಾಮ್ರಾಟ್, ಆರ್‌ಪಿಐ ಶಶಿಕುಮಾರ್, ಆರ್‌ಎಸ್‌ಐ ಮಂಜುನಾಥ್ ದಳವಾಯಿ, ಪಿಎಸ್‌ಐ ಎರಿಯಪ್ಪ, ಶಂಭುಲಿಂಗ, ಶೀಲಾ ಮೂಗನಗೌಡ್ರು, ಮುನಿರತ್ನ, ನಾಗರತ್ನ, ರಾಜಶೇಖರ, ಸುಬ್ರಮಣ್ಯಂ, ಶಿವಕುಮಾರ್, ಎಸ್ ಪಿ ನಾಯ್ಕ್, ವಿಜಯಲಕ್ಷ್ಮಿ, ಬಿಬಿ ಮರಿಯಂ, ರಮಾದೇವಿ ಪಾಲ್ಗೊಂಡಿದ್ದರು.