ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿ

Untitled design(12)
ಕಂಪ್ಲಿಯಲ್ಲಿ ಜರುಗಿದ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳ ಸಭೆಯಲ್ಲಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಮಾತನಾಡಿದರು. ಪ್ರಮುಖರಾದ ಜಿ.ಮಾಧವರಾವ್, ರಾವುಲ್ ನಾಗಪ್ಪ, ಸಿ.ಡಿ.ಗಿರೀಶ್, ಸಣ್ಣ ಹುಲುಗಪ್ಪ, ವಿ.ಮಾರೇಶ್ ಸೇರಿ ಇತರರಿದ್ದಾರೆ.
Published on

ಕಂಪ್ಲಿ: ರಾಜ್ಯದ ಮೂಲ ಆದಿವಾಸಿಗಳ ಸಮಸ್ಯೆಗಳನ್ನು 29ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನಸೆಳೆಯಲಾಗುವುದು ಎಂದು ಬೆಂಗಳೂರಿನ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಹೇಳಿದರು.

ಆದಿವಾಸಿಗಳ ಕಲ್ಯಾಣಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಲಿ

ಪಟ್ಟಣದ ಎಪಿಎಂಸಿ ಆವರಣದಲ್ಲಿ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಆ.9ರಂದು ಬೆಂಗಳೂರಿನಲ್ಲಿ 29ನೇ ವಿಶ್ವ ಆದಿವಾಸಿ ದಿನಾಚರಣೆ ಜರುಗಲಿದೆ. ಆದಿವಾಸಿಗಳ ನೋವು ನಲಿವುಗಳನ್ನು ಮುನ್ನೆಲೆಗೆ ತರುವ ಮೂಲಕ ಸರ್ಕಾರದ ಗಮನಸೆಳೆಯಲಾಗುವುದು. ಪ್ರೊ.ಮುಜಾಪರ್ ಅಸ್ವಾದಿ ವರದಿಯಂತೆ ಅರಣ್ಯದಲ್ಲಿರುವ 3,418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ಕಾಡು ಮತ್ತು ನಾಡಿನ ಆದಿವಾಸಿಗಳ ಕಲ್ಯಾಣಕ್ಕಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಅರ್ಹರಿಗೆ ತಲುಪಿಸಲಿ ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯ ಮೂಲ ಆದಿವಾಸಿಗಳಾದ ಡೊಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ, ಮೇದಾ, ಅಲೆಮಾರಿಗಳಾದ ಸುಡುಗಾಡು ಸಿದ್ಧ, ಚನ್ನದಾಸರು, ಬುಡ್ಗ ಜಂಗಮ ಸೇರಿ ಅಲೆಮಾರಿಗಳಿಗೆ ಭೂಮಿ, ವಸತಿ ಸೇರಿ ಶಾಶ್ವತ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.

ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಉಪಾಧ್ಯಕ್ಷ ಜಿ.ಮಾಧವರಾವ್, ಸಿಂಧೊಳ್ಳಿ ಸಮಾಜದ ರಾಜ್ಯಾಧ್ಯಕ್ಷ ರಾವುಲ್ ನಾಗಪ್ಪ, ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಡಿ.ಗಿರೀಶ್, ಸುಡುಗಾಡು ಸಿದ್ಧ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ ಸಣ್ಣ ಹುಲುಗಪ್ಪ, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಿ.ಮಾರೇಶ್, ಆದಿವಾಸಿ ಡುಂಗ್ರಿ ಗರಾಸಿಯಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ನಿರ್ದೇಶಕ ಜಿ.ವೆಂಕಟೇಶ್, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ಶ್ರೀಕಾಂತ್, ಸದಸ್ಯರಾದ ಎಂ.ಹರಿಕೃಷ್ಣ, ಶಿವಕುಮಾರ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net