ಕಲಬುರಗಿ ಮಾರುಕಟ್ಟೆಗೆ ಆದಿತ್ಯ ಮಿಲ್ಕ್, ಕಿಂಗ್ ಐಸ್‌ಕ್ರೀಮ್

1506KLB01
Published on

ಕಲಬುರಗಿ: ದೇಶದಲ್ಲಿ ಹಾಲು ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೂಲಕ ಮನೆ ಮಾತಾಗಿರುವ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ನಗರದಲ್ಲಿ ಹೊಸದಾಗಿ ಮೂರು ಮಾರಾಟ ಮಳಿಗೆಗಳನ್ನು ಭಾನುವಾರ ಆರಂಭಿಸುವ ಮೂಲಕ ಉತ್ತರ ಕರ್ನಾಟಕ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ವಿಜಯಕಾಂತ ಡೇರಿಯ ಆದಿತ್ಯ ಮಿಲ್ಕ್, ಹಾಲಿನ ಉಪ ಉತ್ಪನ್ನ ಮತ್ತು ಕಿಂಗ್‌ಐಸ್ ಕ್ರೀಮ್‌ನ ನೂತನ ಮಳಿಗೆಗಳನ್ನು ಎಂಬಿ ನಗರದ ಬಸವೇಶ್ವರ ಚೌಕ್ ಬಳಿ, ಆಳಂದ ರಸ್ತೆ ಖಾದ್ರಿ ಚೌಕ್ ಹತ್ತಿರದ ಸಂತೋಷ ಕಾಲನಿ ಹಾಗೂ ಸೇಡಂ ರಸ್ತೆಯ ಓಂನಗರ ಗೇಟ್ ಬಳಿ ಭಾನುವಾರ ಉದ್ಘಾಟಿಸಲಾಯಿತು.

ಡೇರಿ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ದೀಪಾ ಸಿದ್ನಾಳ, ಉಪಾಧ್ಯಕ್ಷರಾದ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ ಅವರು ನೂತನ ಮಳಿಗೆಗಳನ್ನು ಉದ್ಘಾಟಿಸಿ ವಿತರಕರಿಗೆ ಶುಭ ಹಾರೈಸಿದರು.

ಈ ವೇಳೆ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಸಿದ್ನಾಳ ಮಾತನಾಡಿ, ೨೧ ವರ್ಷಗಳಿಂದ ವಿಜಯಕಾಂತ ಡೇರಿ ಗ್ರಾಹಕರ ವಿಶ್ವಾಸ ಕಾಯ್ದುಕೊಂಡು ಬಂದಿದೆ. ಶ್ರೇಷ್ಠ ಗುಣಮಟ್ಟದ ಹಾಲು, ಉಪ ಉತ್ಪನ್ನಗಳ ಮೂಲಕ ಕ್ಷೀರ ಮಾರುಕಟ್ಟೆಯಲ್ಲಿ ತನ್ನದೇ ಆದ ಭರವಸೆ ಮೂಡಿಸಿದೆ. ವರ್ಷದ ಹಿಂದೆ ಶುರುವಾದ ಕಿಂಗ್ ಐಸ್‌ಕ್ರೀಮ್ ಸಹ ಅತ್ಯಂತ ವೇಗದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿದ್ದು, ಗ್ರಾಹಕರ ಮೆಚ್ಚುಗೆಯೊಂದಿಗೆ ಜನಮಾನಸದಲ್ಲಿ ಮನೆ ಮಾಡಿದೆ ಎಂದು ತಿಳಿಸಿದರು.

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಮಾರ್ಗದರ್ಶನ, ಸಹಕಾರದಿಂದ ಕಂಪನಿ ಅತ್ಯಂತ ಯಶಸ್ವಿಯಾಗಿ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇಲ್ಲದೆ ಮುನ್ನಡೆಯುತ್ತಿದೆ. ಎಲ್ಲೆಡೆ ಉತ್ಕÈಷ್ಟ ದರ್ಜೆ ಹಾಲು, ಅದರ ಉತ್ಪನ್ನಗಳನ್ನು ಸಂಸ್ಥೆಯಿAದ ಪೂರೈಸುವುದೇ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.

ಮಾರುಕಟ್ಟೆ ಮ್ಯಾನೇಜರ್ ಹರೀಶಬಾಬು, ಔಟ್‌ಲೆಟ್ ಮಾಲೀಕರಾದ ಮಲ್ಲಿಕಾರ್ಜುನ ಖಾನಾಪುರ, ರೇವಣಸಿದ್ದಯ್ಯ, ಚಂದ್ರಶೇಖರ ಸಿರಗೊಂಡ, ವಿಜಯಕಾಂತ ಡೇರಿ ಮಾರ್ಕೇಟ್ ಟೀಮ್‌ನ ರವೀಂದ್ರ ಜನಗೌಡ, ಉಮೇಶ ಕೋರೆ, ಅಖಿಲೇಶ, ತಿಪ್ಪೇರುದ್ರಸ್ವಾಮಿ, ಶಂಭುಲಿಂಗ, ಮಂಜುನಾಥ, ಆಕಾಶ, ಪವನಕುಮಾರ, ಈಶ್ವರ, ಚಂದ್ರಶೇಖರ, ರುದ್ರಗೌಡ, ಮೆಹಬೂಬ್, ರವಿ ಬೀಡಿ ಸೇರಿ ವಿತರಕರು, ಆದಿತ್ಯ ಮಿಲ್ಕ್ ಹಾಗೂ ಕಿಂಗ್ ಐಸ್‌ಕ್ರೀಮ್‌ನ ಸಿಬ್ಬಂದಿ ಇದ್ದರು.

ಹೊಸ ಪ್ರಾಂಚೈಸಿಗಳಿಗಾಗಿ ಆಸಕ್ತರು ಹೆಲ್ಪ್ಲೈನ್ ಸಂಖ್ಯೆ ೯೯೦೦೨ ೫೫೫೫೬, ಸಂಸ್ಥೆ ಮಾರ್ಕೆಟಿಂಗ್ ವಿಭಾಗದ ಹರೀಶ ಬಾಬು (೯೬೬೩೩ ೨೨೪೭೨) ಅವರನ್ನು ಸಂಪರ್ಕಿಸಬಹುದು.

ಉತ್ಕಷ್ಟ ದರ್ಜೆಯ ಹಾಲಿನ ಉತ್ಪನ್ನ: ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಖೋವಾ, ಧಾರವಾಡ ಪೇಢಾ, ಬೆಳಗಾವಿ ಕುಂದಾ, ಪರಿಶುದ್ಧವಾದ ತುಪ್ಪದ ಮೈಸೂರು ಪಾಕ್, ಪನ್ನೀರು, ತುಪ್ಪ, ಶ್ರೀಖಂಡ, ಸ್ಟಾಂಡರ್ಡ್ ಮಿಲ್ಕ್, ಟೋನ್ಡ್ ಮಿಲ್ಕ್, ಗೋಲ್ಡ್ ಲ್ ಕ್ರೀಂ, ೪೦ ಲೀ. ಕ್ಯಾನ್ ಹಾಲು, ಜೀರಾ ಬಟರ್ ಲಸ್ಸಿ, ಕಪ್ ಮೊಸರು, ಗಡಿಗೆ ಮೊಸರು, ಬೆಣ್ಣೆ, ೆ್ಲವರ್ಡ್ ಇತರ ಹಾಲಿನ ಉತ್ಪನ್ನಗಳನ್ನು ವಿಜಯಕಾಂತ ಡೇರಿ ಉತ್ಪಾದಿಸುತ್ತಿದೆ.

ತರಹೇವಾರಿ ಕಿಂಗ್ ಐಸ್‌ಕ್ರೀಮ್: ಶುದ್ಧ ಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್ ಸ್ಟಿಕ್, ಐಸ್‌ಕ್ರೀಮ್ ಕಪ್, ಐಸ್‌ಕ್ರೀಮ್ ಪ್ರೀಮಿಯಂ, ನಾವೆಲ್ಟಿ, ಟ್ವಿಸ್ಟ್ ಐಸ್‌ಕ್ರೀಮ್ ಕಪ್, ಪ್ರೀಮಿಯಂ ಐಸ್‌ಕ್ರೀಮ್ ಟಬ್, ಸಿಪ್-ಅಪ್, ಐಎಂಎಲ್ ಕಪ್,  ಫ್ಯಾಮಿಲಿ ಪ್ಯಾಕ್, ಬಲ್ಕ್ ಪ್ಯಾಕ್ ಐಸ್‌ಕ್ರೀಮ್ ಸೇರಿ ಭಿನ್ನ ವಿಭಿನ್ನವಾದ ತರಹೇವಾರಿ ಐಸ್‌ಕ್ರೀಮ್‌ಗಳನ್ನು ಕಿಂಗ್ ಹೊಂದಿದೆ.

ಕಳೆದ ೨೧ ವರ್ಷಗಳಿಂದ ವಿಜಯಕಾಂತ ಡೇರಿ, ಆದಿತ್ಯ ಮಿಲ್ಕ್ ಗುಣಮಟ್ಟದೊಂದಿಗೆ ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿದೆ. ಇದೀಗ ಉತ್ತರ ಕರ್ನಾಟಕ ಮಾರುಕಟ್ಟೆಗೆ ಪ್ರಥಮ ಹೆಜ್ಜೆಯಾಗಿ ಕಲಬುರಗಿಯಲ್ಲಿ ಪ್ರಾಂಚೈಸಿಗಳನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ ೧೭ಕ್ಕೂ ಹೆಚ್ಚು ಮಳಿಗೆ, ಉಕದಲ್ಲಿ ೧೫೦ಕ್ಕೂ ಹೆಚ್ಚು ಮಳಿಗೆ ಆರಂಭಿಸುವ ಗುರಿ ಹೊಂದಲಾಗಿದೆ. | ವಿಜಯಕಾಂತ ಸಿದ್ನಾಳ ಉಪಾಧ್ಯಕ್ಷರು, ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶ್ರೇಷ್ಠ ಉತ್ಪನ್ನಗಳನ್ನು ಕೊಡುವ ಅಚಲ ಭರವಸೆಯನ್ನು ಕಾಪಾಡಿಕೊಂಡು ಬಂದಿದ್ದು, ಇದೀಗ ಉತ್ತರ ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲಾಗಿದೆ. ಉಕದಲ್ಲಿ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಮಾರುಕಟ್ಟೆ ಪ್ರವೇಶಿಸಿದ್ದು, ನೂತನ ಮಳಿಗೆಗಳನ್ನು ಉದ್ಘಾಟಿಸಲಾಗಿದೆ. ಜಿಲ್ಲೆಯಲ್ಲಿ ೨೦ಕ್ಕೂ ಹೆಚ್ಚು ಮಳಿಗೆ ಆರಂಭಿಸುವ ಗುರಿ ಹೊಂದಲಾಗಿದೆ. ಜನರಿಗೆ ಗುಣಮಟ್ಟದ ಹಾಲು, ಹಾಲಿನ ಉತ್ಪನ್ನ, ಕಿಂಗ್ ಐಸ್‌ಕ್ರೀಮ್ ಒದಗಿಸುವುದೇ ಮುಖ್ಯ ಧ್ಯೇಯ. | ದೀಪಾ ಸಿದ್ನಾಳ ವ್ಯವಸ್ಥಾಪಕ ನಿರ್ದೇಶಕರು, ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್

೩ ಲಕ್ಷ ಲೀಟರ್ ಹಾಲು, ಹೊಸ ಕಾರ್ಖಾನೆ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ರೈತರಿಂದ ೧.೫೦ ಲಕ್ಷ ಲೀಟರ್ ಹಾಲು ಖರೀದಿಸಿ ಆದಿತ್ಯ ಹಾಲು, ಹಾಲಿನ ಉಪ ಉತ್ಪನ್ನ, ಕಿಂಗ್ ಐಸ್‌ಕ್ರೀಮ್ ಉತ್ಪಾದಿಸುತ್ತಿದೆ. ಇದನ್ನು ಮೂರು ಲಕ್ಷ ಲೀಟರ್‌ಗೆ ಹೆಚ್ಚಿಸಿ ಹೊಸ ಕಾರ್ಖಾನೆ ಸ್ಥಾಪಿಸಿ ಕರ್ನಾಟಕ, ಮಹಾರಾಷ್ಟç ಸೇರಿ ದೇಶ-ವಿದೇಶದಲ್ಲೂ ಮಳಿಗೆ ಆರಂಭಿಸಿ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net