

ರಾಯಚೂರು ಹೊಸಮನಿ ಪ್ರಕಾಶನ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬಶೀರ ಅಹ್ಮದ ಹೊಸಮನಿಯವರ ’ಆದಿಲ್ ಶಾಹಿ’ ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಆ.20 ರಂದು ಬೆಳಗ್ಗೆ 10.30ಕ್ಕೆ ಬಾಲಕರ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದೆಂದು ಹೊಸಮನಿ ಪ್ರಕಾಶನದ ಕಾರ್ಯದರ್ಶಿ ಖುಷಿ ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಹಿರಿಯ ಚಿತ್ರ ಕಲಾವಿದ ಎಚ್.ಎಚ್. ಮ್ಯಾದಾರ ಉದ್ಘಾಟಿಸಲಿದ್ದಾರೆ. ವಿಜಯಪುರದ ಹಿರಿಯ ಉಪನ್ಯಾಸಕ ಎ.ಎಲ್. ನಾಗೂರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ ವೀರಹನುಮಾನ ಕೃತಿ ಪರಿಚಯಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಾಲಕರ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ.ಎಸ್.ಬಂಡಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಉಪನ್ಯಾಸಕ ಗೋವರ್ಧನರೆಡ್ಡಿ, ಕನ್ನಡ ಮಿತ್ರ ಕೂಟದ ಅಧ್ಯಕ್ಷ ಅಶೋಕಕುಮಾರ ಜೈನ್, ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರಫೀಕ್ ಅಹ್ಮದ್, ಜಾನವೆಸ್ಸಿ, ಮಲ್ಲಿಕಾರ್ಜುನ ಸ್ವಾಮಿ, ರಂಗ ನಿರ್ದೇಶಕ ಪ್ರವೀಶರೆಡ್ಡಿ ಗುಂಜಳ್ಳಿ, ಕುಂಚ ಚಿತ್ರ ಕಲಾವಿದ ಮಲ್ಲಿಕಾರ್ಜುನ ಆಲೂರು,ಕೃತಿಯ ಕತೃ ಬಶೀರ ಅಹ್ಮದ ಹೊಸಮನಿ, ಪರ್ವಿನ್ ಬೇಗಂ ಹೊಸಮನಿ, ಬೀಬಿ ಫಾತಿಮಾ, ಷಂಷಾದ ಬೇಗಂ, ಸೈದಾಬಾನು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಮಣ್ಣ ಮ್ಯಾದಾರ, ರಫೀಕ್ ಅಹ್ಮದ್, ಬಷೀರ ಅಹ್ಮದ ಹೊಸಮನಿ, ಫರ್ವಿನ್ ಬೇಗಂ ಇದ್ದರು.